ಹೇಮಾ ಹಟ್ಟಂಗಡಿ ಆಶಿಶ್ ಸೇನ್ ಅವರ ಆತ್ಮಕಥನವನ್ನುಲೇಖಕಿ ಸಂಯುಕ್ತ ಪುಲಿಗಲ್ ಅವರು ‘ಗೂಡಿನಿಂದ ಬಾನಿಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ವಿದ್ಯುತ್ ಉದ್ದಿಮೆಯಲ್ಲಿ ಸೆಣೆಸಿ ಗೆದ್ದ ಹೆಣ್ಣೊಬ್ಬಳ ಸಾಹಸದ ಕತೆಯಾಗಿದೆ. 1996 ರಲ್ಲಿ ಹೇಮಾ ಹಟ್ಟಂಗಡಿ ಅವರು ಕನ್ಸರ್ವ್‌ನ ಸಿಇಒ ಆಗಿದ್ದು, ಕನ್ಸರ್ವ್ ಡಿಜಿಟಲ್ ವಿದ್ಯುತ್ ಮಾಪನಗಳನ್ನು ತಯಾರಿಸುವ ಬೆಂಗಳೂರಿನ ಒಂದು ಕೌಟುಂಬಿಕ ವ್ಯಾಪಾರವಾಗಿ ಪ್ರಾರಂಭವಾಗಿತ್ತು. ಆ ನಂತರದ ಹನ್ನೆರಡು ವರ್ಷಗಳಲ್ಲಿ ಹೇಮಾ ಆ ಸಂಸ್ಥೆಯನ್ನು 100 ಕೋಟಿ ಆದಾಯದೊಂದಿಗೆ ಮಾರುಕಟ್ಟೆಯಲ್ಲಿ ಮುಂಚೂಣಿಯ ಸ್ಥಾನವನ್ನು ಗಳಿಸುವಂತೆ ಪರಿವರ್ತಿಸಿದರು. ಆಗ್ಗೆ ಕನ್ಸರ್ವ್ ಭಾರತದ ಬಹುದೊಡ್ಡ ವಿದ್ಯುಚ್ಛಕ್ತಿ ನಿರ್ವಹಣಾ ಸಂಸ್ಥೆಯಾಗಿತ್ತು. ಆರಂಭದಿಂದ ಸಂಸ್ಥೆಯ ಕುರಿತಾದ ಹೇಮಾ ಅವರ ವ್ಯಾಪಾರದ ವ್ಯಾಪ್ತಿಯು ಜಾಗತಿಕ ಮಟ್ಟದಲ್ಲೇ ಇದ್ದಿತ್ತು. 2009 ರಲ್ಲಿ ಸಂಸ್ಥೆಯು ಶ್ನೇಡರ್ ಎಲೆಕ್ಟ್ರಿಕ್ ಜೊತೆಗೆ ವಿಲೀನಗೊಂಡಿತು. ತದ ನಂತರ ಹೇಮಾ ಹಟ್ಟಂಗಡಿ ಅವರು, ಸಮಾಜ ಸೇವೆ, ಸಾಮುದಾಯಿಕ, ಕೆಲಸಗಳತ್ತ ಗಮನ ಹೊರಳಿಸಿದರು. ಕನ್ಸರ್ವ್‌ನ ವ್ಯವಸ್ಥೆ, ಸಾಂಸ್ಥಿಕ ಕಾರ್ಯಾಚರಣೆಗಳು ಪಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಭಾಗವಾಗಿತ್ತು. ಗಟ್ಟಿಮನಸ್ಸು ಮತ್ತು ನಿರ್ಧಾರಗಳ ಒಂದು ಸ್ಪೂರ್ತಿದಾಯಕ ಕಥೆಯಾದ ‘ಗೂಡಿನಿಂದ ಬಾನಿಗೆ’ ಪುಸ್ತಕವು ವಿದ್ಯಾರ್ಥಿಗಳ ಕಲಿಕೆಗೆ ಅತ್ಯುತ್ತಮ ಮಾದರಿಯಾಗಿದೆ ಎಂಬುದು ಅನುವಾದಕಿಯ ಮಾತು.
©2024 Book Brahma Private Limited.