ವಾಲ್ಮೀಕಿ

Author : ಸರಜೂ ಕಾಟ್ಕರ್‌

Pages 199

₹ 200.00




Year of Publication: 2021
Published by: ಸೃಷ್ಟಿ ಪಬ್ಲಿಕೇಷನ್ಸ್
Address: 121, 13ನೇ ಮುಖ್ಯರಸ್ತೆ, ಎಂ.ಸಿ ಬಡಾವಣೆ, ವಿಜಯ ನಗರ, ಬೆಂಗಳೂರು-560040.

Synopsys

ಲೇಖಕ ಸರಜೂ ಕಾಟ್ಕರ್ ಅವರ ಅನುವಾದಿತ ಕೃತಿ-ವಾಲ್ಮೀಕಿ. ಡಾ. ಭೀಮರಾವ್ ಗಸ್ತಿ ಎಂಬುವರ ಆತ್ಮಕಥೆ ಇದು. ಮರಾಠಿಯ ’ಬೇರಡ’ ವನ್ನು ಕನ್ನಡಕ್ಕೆ ‘ವಾಲ್ಮೀಕಿ’ ಎಂದು ಅನುವಾದಿಸಿದ್ದಾರೆ. ಸರಜೂ ಕಾಟ್ಕರ್ ಹೇಳುವಂತೆ ಈ ಎಲ್ಲ ಆತ್ಮಕಥೆಗಳ ಸ್ಥಾಯೀಭಾವ ಆಕ್ರೋಶವಿದ್ದರೂ, ಅವೆಲ್ಲವುಗಳೂ ಪ್ರಾಮಾಣಿಕವಾಗಿವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಡಾ. ಭೀಮರಾವ್ ಅವರು ಮಹಾರಾಷ್ಟ್ರದಲ್ಲಿ ಬೇಡರ ಸಮೂದಾಯದ ಅಭಿವೃದ್ಧಿಗಾಗಿ ಹೋರಾಟ ಮಾಡಿದ ನಾಯಕರು.  ಕರ್ನಾಟಕದ ಬೆಳಗಾವಿಯಿಂದ ಕೇವಲ 6 ಕಿ.ಮೀ. ದೂರದ ಯಮನೂರು ಎಂಬ ಗ್ರಾಮದವರು. ಹೀಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿಯ ಬೇಡರ ಸಮೂದಾಯದ ಅಭಿವೃದ್ಧಿಗಾಗಿ ಸಂಘಟನೆಗಳ ಮೂಲಕ ಹೋರಾಟ ಮಾಡಿ ಸಮಾಜ ಚಿಂತಕರೆನಿಸಿಕೊಂಡವರು. ನಾವು ಅಪರಾಧಿ ಜನರಲ್ಲ, ನಾವು ಪ್ರಾಮಾಣಿಕರಾಗಿ ದುಡಿದು ತಿಂದರೆ ನಮ್ಮನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಬೇಡ ಬೇಡ ಜನಾಂಗಕ್ಕೆ ಧೈರ್ಯ ತುಂಬುತ್ತಾರೆ ಗಸ್ತಿಯವರು. ಬೇಡರಲ್ಲಿ ಆತ್ಮವಿಶ್ವಾಸವನ್ನೂ, ನೈತಿಕ ಧೈರ್ಯವನ್ನೂ ಕಾಯಕ ನಿಷ್ಠೆಯನ್ನೂ ತುಂಬಲು ಅವರು ಬಹಳ ಶ್ರಮಪಡಬೇಕಾಯಿತು. ಅವಮಾನಕ್ಕೆ ಒಳಗಾದ ಜನಾಂಗದ ನೋವು ಸಂಕಟ, ಸಿಟ್ಟು ಇಂದು ನಿನ್ನೆಯದಲ್ಲ, ನಾಳೆ ಮುಗಿಯುವುದೆಂಬ ನೆಚ್ಚಿಕೆಯಿಲ್ಲ. ಆದರೂ ಪ್ರಯತ್ನ ಮಾಡಬೇಕು; ಈ ಪ್ರಕ್ರಿಯೆ ನಿರಂತರ ಎಂಬುದು ಡಾ. ಭೀಮರಾವ್ ಗಸ್ತಿಯವರ ನಂಬಿಕೆ. ‘ವಾಲ್ಮೀಕಿ’ ಆಥ್ಮಕಥನದ ಮುಕ್ತಾಯ ಇದನ್ನೇ ತಿಳಿಸುತ್ತದೆ. 2017ರ ಆಗಸ್ಟ್ 8 ರಂದು ಅವರು ನಿಧನರಾದರು. ಈ ನಾಯಕನ ಬದುಕು ಹಾಗೂ ಹೋರಾಟದ ಸಾಧನೆ, ಸಾಮಾಜಿಕ ಚಿಂತನೆಗಳನ್ನು ಕಟ್ಟಿಕೊಡುವ ಕೃತಿ ಇದಾಗಿದೆ.

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Related Books