ವಿಶ್ವದ ಖ್ಯಾತ ಲೇಖಕ ಪಾಬ್ಲೋ ನೆರೂಡ ಅವರ ಆತ್ಮಕಥೆಯ ಸಂಗ್ರಹಾನುವಾದದ ಕೃತಿ-ನೆನಪು ತೆರೆವ ಕವಿಮನ. ಲೇಖಕಿ ನಯನಾ ಕಾಶ್ಯಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಖ್ಯಾತ ಲೇಖಕ ಜಿ. ರಾಜಶೇಖರ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ದಕ್ಷಿಣ ಅಮೆರಿಕ ಖಂಡದ ಚಿಲಿ ದೇಶದ ಕವಿ ಪಾಬ್ಲೋ ನರೂಡ ಕನ್ನಡ ಕಾವ್ಯ ಪ್ರೇಮಿಗಳಿಗೆ ಅಪರಿಚಿತನಲ್ಲ. ನರೂಡನ ಆತ್ಮಕಥೆ ‘ಮೆವ್ವಾ’ ಆಯ್ದ ಭಾಗಗಳ ಭಾಷಾಂತರವಾಗಿದೆ ಈ ಕೃತಿ. ಕನ್ನಡ ಮಾತಿನ ಲಯ, ಧ್ವನಿಗಳನ್ನು ತಮ್ಮ ಬರವಣಿಗೆಯಲ್ಲಿ ಯಥಾವತ್ತಾಗಿ ಮೂಡಿಸುವ ಸಾಮರ್ಥ್ಯವನ್ನು ಪಡೆದಿರುವವರು. ಮೂಲ ಕೃತಿಯ ಲವಲವಿಕೆ ಮತ್ತು ತೀವ್ರತೆಗಳನ್ನು ಕನ್ನಡ ನುಡಿಯ ಜಾಯಮಾನಕ್ಕೆ ವ್ಯತ್ಯಯ ಬಾರದಂತೆ ಅನುವಾದಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಕವಿಯ ಕಾಳಜಿ, ನಿಷ್ಕಳಂಕ ಜೀವನೋತ್ಸಾಹ ಮತ್ತು ಮುಗ್ಧತೆ ನೆರೂಡನ ಆತ್ಮಕಥೆ ಸಾದರಪಡಿಸುವ ಈ ಗುಣಗಳನ್ನು ಸ್ವಾರಸ್ಯ ಕೆಡದಂತೆ ಓದುಗರಿಗೆ ಮನಗಾಣಿಸುವುದರಲ್ಲಿ ನಯನಾ ಅವರ ಅನುವಾದ ಸಫಲವಾಗಿದೆ. ನರೂಡನ ಆತ್ಮಕಥೆ ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಕಾವ್ಯದ ಸಹೃದಯಿಗಳಿಗೆ ಮಾತ್ರವಲ್ಲ; ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇರುವ ಎಲ್ಲರಿಗೂ ಸಂತಸ ತರುವಂಥಾದ್ದಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.