ಬದುಕಿರುವುದೇ ಕಥೆ ಹೇಳಲಿಕ್ಕೆ

Author : ರಘುನಾಥ ಟಿ.ಎಸ್.

Pages 656

₹ 725.00




Year of Publication: 2020
Published by: ಸೃಷ್ಟಿ ಪಬ್ಲಿಕೇಷನ್ಸ್
Address: #121, 13ನೇ ಮುಖ್ಯರಸ್ತೆ, ಎಂ.ಸಿ ಲೇಔಟ್, ವಿಜಯನಗರ, ಬೆಂಗಳೂರು- 560040
Phone: 9845096668

Synopsys

‘ಬದುಕಿರುವುದೇ ಕಥೆ ಹೇಳಲಿಕ್ಕೆ’ ಕೊಲಂಬಿಯಾ ಮೂಲದ ಖ್ಯಾತ ಕಾದಂಬರಿಕಾರ, ಕತೆಗಾರ ಹಾಗೂ ಪತ್ರಕರ್ತ ಮಾರ್ಕೆಸ್ ನ ಆತ್ಮವೃತ್ತಾಂತದ ಕನ್ನಡಾನುವಾದ. ಈ ಕೃತಿಯನ್ನು ಕನ್ನಡಕ್ಕೆ ತಂದವರು ಹಿರಿಯ ಲೇಖಕ, ಅನುವಾದಕ ಟಿ.ಎಸ್. ರಘುನಾಥ್.

ಮಾರ್ಕೆಸ್ ನ ಆತ್ಮವೃತ್ತಾಂತವು ಶ್ರೀಮಂತಿಕೆಯಿಂದ ವರದಿ ಮಾಡಲ್ಪಟ್ಟಿದ್ದು, ಅದ್ಭುತವಾದ, ವಿಸ್ತೃತ ಕಥೆಯನ್ನೊಳಗೊಂಡಿದ್ದು, ಯುವ ಕಲೆಗಾರನೊಬ್ಬನನ್ನು ಕೇಂದ್ರಬಿಂದುವಿಗೆ ತಂದುನಿಲ್ಲಿಸುವುದಾಗಿದೆ.  ಆತ ಸೃಜಿಸುವ ಕಥನ ಸಾಹಿತ್ಯಕ್ಕೆ ಸಂಬಂಧಿಸಿದ ಜನರನ್ನು ಮತ್ತೆ ಸ್ಥಳಗಳನ್ನು ಪರಿಚಯಿಸುವುದಾಗಿದೆ. ಇಂದಿನ ನಮ್ಮ ಸಮಕಾಲೀನ ಸಾಹಿತ್ಯ ಪ್ರಪಂಚದಲ್ಲಿ ಮಾರ್ಕೆಸ್ ನ ರೀತಿಯಲ್ಲಿ ಮಾಂತ್ರಿಕ ಕಥನ ಗುಣವನ್ನು ಅಭಿವ್ಯಕ್ತಿಪಡಿಸುವವರು ಖಂಡಿತವಾಗಿಯೂ ವಿರಳ. ಮಾರ್ಕೆಸ್ ನ ಈ ಕೃತಿಯಲ್ಲಿ ಆತನು ಹುಟ್ಟಿದ ವರ್ಷ 1927ರಿಂದ ಪ್ರಾರಂಭಗೊಂಡು 1950ರವರೆಗಿನ ಬದುಕು ಪ್ರಕಟಗೊಂಡಿದ್ದು, ಇದನ್ನು ಮೊದಲನೆಯ ಸಂಪುಟವೆಂದು ಹೇಳಲಾಗಿದೆ. ಇಲ್ಲಿ ಮಾರ್ಕೆಸ್ ಆತನ ಹೆಂಡತಿಯಾಗುವವಳಿಗೆ ಮದುವೆಯ ಪ್ರಸ್ತಾವ ಮಾಡುವವರೆಗಿನ ಬದುಕನ್ನು ಚಿತ್ರಿಸಲಾಗಿದೆ. 

About the Author

ರಘುನಾಥ ಟಿ.ಎಸ್.
(09 February 1954)

ಲೇಖಕ, ಅನುವಾದಕ ಟಿ.ಎಸ್. ರಘುನಾಥ್ ಅವರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲೂಕಿನ ತುರುವನೂರಿನವರು. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು, ನಗರದ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1985ರಿಂದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು ಮಲ್ಲೇಶ್ವರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಂತರ ಸ್ನಾತಕೋತ್ತರ ಸ್ಥಾಪಕ ಸಂಯೋಜಕರಾಗಿ ಕಾರ್ಯನಿರ್ವಹಿಸಿ 2014ರಲ್ಲಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆ ಬಹು ಮುಖ್ಯವಾಗಿ ಕಥನ ಪರಂಪರೆ ಮತ್ತು  ಸಂಶೋಧನಾ ಅಧ್ಯಯನಗಳಲ್ಲಿ ಆಸಕ್ತಿ ಹೊಂದಿರುವ ಅವರು ಪಾಶ್ಚಾತ್ಯ ಸಾಹಿತ್ಯ ಅದರಲ್ಲೂ ರಷ್ಯನ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.  ನಿವೃತ್ತಿಯ ನಂತರ ...

READ MORE

Related Books