'ಕಂದುಕೂರಿ ವೀರೇಶಲಿಂಗಂ' ಸಂಕ್ಷಿಪ್ತ ಆತ್ಮಕಥೆಯನ್ನು ಸ. ರಘುನಾಥ ಅವರು ಕನ್ನಡೀಕರಿಸಿದ್ದಾರೆ. 19 ನೇ ಶತಮಾನ ಭಾರತೀಯ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ತುಂಬಾ ಮಹತ್ವದ ಕಾಲ,.ಪುನರುತ್ಥಾನಯುಗ, ಈ ಯುಗವನ್ನು ರೂಪಿಸಿದ, ನಡೆಸಿದ ಪ್ರತಿಭಾ ಮೂರ್ತಿಗಳು ಹಲವು ಜನ. ಒಂದು ಪ್ರಾಂತ್ಯದಿಂದಲ್ಲ, ಭಾರತದ ಹಲವಾರು ಪ್ರಾಂತ್ಯಗಳಿಂದ ಇಂಥಾ ತ್ರಿವಿಕ್ರಮ ಮೂರ್ತಿಗಳು ಉದ್ಭವಿಸಿದರು. ಸಾಮಾಜಿಕ ಜೀವನ, ರಾಜಕೀಯರಂಗ, ಸಾಹಿತ್ಯ ಕಲೆ ಹೀಗೆ ಹಲವಾರು ರಂಗಗಳಲ್ಲಿ ಹೊಸ ಚೈತನ್ಯ ಮೂಡಿಸಿದರು. ತಮ್ಮ ವೈಯಕ್ತಿಕ ಜೀವನದ ಕಡೆಗೆ ಲಕ್ಷ್ಯಕೊಡದೆ ತಾವು ಹಿಡಿದ ಕಾರ್ಯಕ್ಷೇತ್ರದಲ್ಲಿ ದುಡಿಯುತ್ತಲೇ ರಾಷ್ಟ್ರೀಯತೆಯ ಭಾವವನ್ನು ಮೂಡಿಸಿದರು. ಇಂಥ ಪ್ರಾತಃಸ್ಮರಣೀಯರಲ್ಲಿ ಶ್ರೀ ಕಂದುಕೂರಿ ವೀರೇಶಲಿಂಗಂ ಪಂತುಲು ಅವರದ್ದು ಎದ್ದುಕಾಣುವ ಅನನ್ಯ ಪ್ರತಿಭೆ. ಅವರ ಬದುಕಿನ ಕುರಿತಾದ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿದೆ.
©2025 Book Brahma Private Limited.