ಧೀಮಂತ ರಾಜಕೀಯ ನಿಪುಣರೆಂದೇ ಕನ್ನಡಿಗರಲ್ಲಿ ಪ್ರಸಿದ್ದರಾಗಿದ್ದ, ಮತ್ತು ಬಹುಕಾಲ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಎಂ ಇಸ್ಮಾಯಿಲ್ ಅವರ ’ಮೈ ಪಬ್ಲಿಕ್ ಲೈಫ್’ ಕೃತಿಯನ್ನು ಲೇಖಕರಾದ ಗಜಾನನ ಶರ್ಮ ಅವರು ಅನುವಾದಿಸಿ ’ ನನ್ನ ಸಾರ್ವಜನಿಕ ಬದುಕು’ ಎಂಬ ಶೀರ್ಷಿಕೆಯಡಿ ತಂದಿದ್ದಾರೆ.
ಸರ್ ಮಿರ್ಜಾ ಇಸ್ಮಾಯಿಲ್ ಅವರ ಬಗ್ಗೆ ಸಂಕ್ಷಿಪ್ತವಾದ ವಿವರಗಳನ್ನು ನೀಡುತ್ತಾ ಅವರ ಶಿಕ್ಷಣ, ವಿದ್ಯಾಭ್ಯಾಸ, ಪದವಿ, ಕಾರ್ಯಕ್ಷೇತ್ರ, ಕಾರ್ಯ ವೈಖರಿ, ಆಡಳಿತ ಕ್ರಮ, ರಾಜಕೀಯ ನಿಲುವು, ಸಾಂಸ್ಕೃತಿಕ ಕೊಡುಗೆ, ಕೃಷಿ, ಕೈಗಾರಿಕೆ, ಸಾಮಾಜಿಕ ಕ್ಷೇತ್ರಗಳಲ್ಲಿ ನಿಭಾಯಿಸಿದ ಜವಬ್ದಾರಿಗಳೆಲ್ಲವನ್ನೂ ಈ ಕೃತಿ ವಿಶ್ಲೇಷಿಸುತ್ತದೆ.
ಮಿರ್ಜಾ ಇಸ್ಮಾಯಿಲ್ ಒಬ್ಬ ಅಸಾಧಾರಣ ವ್ಯಕ್ತಿಯಾಗಿದ್ದ ಬಗೆ ಮತ್ತು ತಮ್ಮ ಕಾಲವನ್ನು ಮೀರಿ ಆಲೋಚಿಸಿಬಲ್ಲ ರಾಜಕೀಯ ಮುತ್ಸದ್ದಿಯೆಂಬುದನ್ನು ಸಮರ್ಥವಾಗಿ ಈ ಕೃತಿ ಪ್ರತಿಪಾದಿಸುತ್ತದೆ.
©2025 Book Brahma Private Limited.