ನನ್ನ ಜನುಮದ ದುರಂತದ ಕಥೆ

Author : ಚಂದ್ರಕಾಂತ ಪೋಕಳೆ

Pages 184

₹ 60.00




Year of Publication: 2013

Synopsys

ಡಾ. ಅಂಬೇಡ್ಕರ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಶಿಕ್ಷಕಿಯಾಗಿ, ಶಿಕ್ಷಣಾಧಿಕಾರಿಯಾಗಿ ಎದುರಾದ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಸಾರ್ಥಕತೆಯನ್ನು ಪಡೆದ ದಲಿತ ಹೆಣ್ಣು ಮಗಳಾದ ಶಾಂತಾಬಾಯಿ ಕಾಂಬಳೆ ಅವರ ಆತ್ಮಕಥೆ ಇದು. ಎಲ್ಲರಿಗೂ, ಅದರಲ್ಲಿಯೂ ದಲಿತ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ ತುಂಬುವಂತಹ ಕಥಾನಕ ಇದು.

ಶಿಕ್ಷಕಿಯಾಗಿರುವುದು ಕೇವಲ ಹೊಟ್ಟೆಪಾಡಿಗಾಗಿ ಅಲ್ಲ. ಬದಲಿಗೆ ಗ್ರಾಮೀಣ ಪ್ರದೇಶದ ಮಕ್ಕಳು ಸಾಕಷ್ಟು ವಿದ್ಯೆಯನ್ನು ಕಲಿಯಲಿ ಎಂಬ ಅವರ ಹಂಬಲಸಾರ್ಥಕತೆ ಕಂಡುಕೊಂಡಿತು. ಈ ಕೃತಿ ಮರಾಠಿಯಿಂದ ಇಂಗ್ಲಿಷ್ ಗೆ ಮತ್ತು ಫ್ರೆಂಚ್ ಭಾಷೆಗೆ ಅನುವಾದಗೊಂಡಿದೆ. ಚಂದ್ರಕಾಂತ ಪೋಕಳೆ ಯವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books