ನೊಬೆಲ್ ಪ್ರಶಸ್ತಿ ಪುರಸ್ಕೃತ, ಬಾಂಗ್ಲಾ ದೇಶದ ಅರ್ಥಶಾಸ್ತ್ರಜ್ಞ ಡಾ. ಮಹಮದ್ ಯೂನಸ್ ಅವರ ಆತ್ಮ ಚರಿತ್ರೆಯ ಕೃತಿ ಇದು. ಲೇಖಕ ಎನ್. ಜಗದೀಶ ಕೊಪ್ಪ ಅವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತಕ್ಕಿಂತಲೂ ಕಠೋರವಾದ ಬಡತನ ಎದುರಿಸುತ್ತಿರುವ ಬಾಂಗ್ಲಾ ದೇಶದ ಆರ್ಥಿಕ ಸ್ಥಿತಿಗತಿಯ ಕುರಿತು ಮಹತ್ವದ ವಿಚಾರಗಳನ್ನು ಮಂಡಿಸಿದ್ದು, ವಿಶ್ವದ ಗಮನ ಸೆಳೆದಿದ್ದ ಯೂನಸ್ ಅವರು ತಮ್ಮ ಕೃತಿಯಲ್ಲಿ ಈ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
©2025 Book Brahma Private Limited.