ಧರ್ಮಾನಂದ ಕೊಸಾಂಬಿಯವರ ಬದುಕು, ಬರಹ ಸಾಧನೆಗಳ ಕುರಿತು ಈ ಕೃತಿಯು ಕಟ್ಟಿಕೊಡುತ್ತದೆ. ಚಿಂತಕರಾಗಿ ಅವರು ಸಮಾಜವಾದದ ಸಿದ್ಧಾಂತವನ್ನು ಬೌದ್ಧಧರ್ಮದ ನೀತಿ ತತ್ವದೊಂದಿಗೆ ಮತ್ತು ಇವೆರಡನ್ನೂ ಮಹಾತ್ಮಾ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವದೊಂದಿಗೆ ಸಂಯೋಜಿಸಿ, ಸಮಾನತಾವಾದ ಮತ್ತು ಜಾಗತಿಕ ಶಾಂತಿಯ ಕಲ್ಪನೆಗಳನ್ನು ರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಸಾರ ಮಾಡುವ ಪ್ರಯತ್ನವನ್ನು ಧರ್ಮಾನಂದ ಕೊಸಾಂಬಿ ಅವರು ನಡೆಸಿದ್ದಾರೆ.
ಅಧ್ಯಾತ್ಮಿಕ ಮತ್ತು ನೈತಿಕ ಪ್ರಾಮಾಣಿಕತೆಯನ್ನು ಹೊಂದಿದ್ದ ಧರ್ಮಾನಂದರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಸಾಮಾಜಿಕ ಮತ್ತು ರಾಜಕೀಯ ಕಾಳಜಿಗಳನ್ನು ಆಧರಿಸಿ, ತಮ್ಮ ಹುಡುಕಾಟದಿಂದ ಸಾಪೇಕ್ಷವಾಗಿ ನಿರ್ದಿಷ್ಟ ಹಾಗೂ ಪ್ರತ್ಯೇಕ ಸ್ಥಾನವನ್ನು ಪಡೆಯುತ್ತಾರೆ. 20ನೆಯ ಶತಮಾನದ ಭಾರತದಲ್ಲಿ ಬೌದ್ಧಧರ್ಮವನ್ನು ಜೀವಂತ ಧರ್ಮವಾಗಿ ಪುನಶ್ವೇತನಗೊಳಿಸಿದ ಕೀರ್ತಿ ಧರ್ಮಾನಂದರಿಗೆ ಸಲ್ಲುತ್ತದೆ. ಬೌದ್ಧಧರ್ಮವನ್ನು ಪುನಶ್ವೇತನ ಗೊಳಿಸುವ ಕಾರ್ಯದಲ್ಲಿ ಅವರು ಧರ್ಮದ ಸಿದ್ದಾಂತವನ್ನು ಮತ್ತು ಆಚರಣೆಗಳನ್ನು ಮತ್ತೆ ಪರಿಚಯಿಸಿದ್ದಲ್ಲದೆ, ಅದರ ಪ್ರಸಕ್ತತೆಯನ್ನು ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಸಿದ್ದಾಂತಗಳೊಂದಿಗೆ ಸ್ಥಾಪಿಸುವುದರ ಮೂಲಕ ಹೊಸದಾದ ಮತ್ತು ಸಮಂಜಸವಾದ ಜಾಗತಿಕ ದೃಷ್ಟಿಕೋನವನ್ನು ಸೃಷ್ಟಿಸಿದ್ದಾರೆ. ಇದು ಹೇಗೆ ಮತ್ತು ಯಾಕೆ ನಡೆಯಿತೆನ್ನುವ ಕಥೆಯು ಮರಾಠಿಯಲ್ಲಿ 'ನಿವೇದನ' ಎಂಬ ಸಂಕ್ಷಿಪ್ತ ಶೀರ್ಷಿಕೆಯೊಂದಿಗೆ ಪರಿಚಿತವಾಗಿರುವ ಅವರ ಆತ್ಮಕಥನದ ನಿರೂಪಣೆ (ಆತ್ಮ-ನಿವೇದನ)ಯ ಮೂಲಕ ಅನಾವರಣಗೊಂಡಿದೆ. ಈ ಕೃತಿಯನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.