ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಆತ್ಮಕಥನ ‘ನಾನು ಅವನಲ್ಲ ಅವಳು...!’ ಲಿವಿಂಗ್ ಸ್ಮೈಲ್ ವಿದ್ಯಾ ಅವರು ತಮಿಳಿನಲ್ಲಿ ಬರೆದಿರುವ ಈ ಆತ್ಮಕಥನವನ್ನು 'ನಾನು ಅವನಲ್ಲ.. ಅವಳು' ಎಂಬ ಶೀರ್ಷಿಕೆಯಡಿ ಲೇಖಕಿ ಡಾ.ತಮಿಳು ಸೆಲ್ವಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗಪರಿವರ್ತಿತ ವ್ಯಕ್ತಿಯೊಬ್ಬರ ಆತ್ಮಕತೆ ಇದು. ಈ ಕೃತಿಯನ್ನು ಆಧರಿಸಿ ಬಿ. ಎಸ್. ಲಿಂಗದೇವರು ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಮಾದೇಶನೆಂಬ ಹುಡುಗನು ಲಿಂಗಪರಿವರ್ತನಗೊಂಡು ಅನುಭವಿಸುವ ಜೀವನದ ದಾರುಣತೆಯನ್ನು ಮತ್ತು ಹಿಜಡಾ ಲೋಕದ ಕಥೆಯನ್ನು ಒಳಗೊಂಡಿದೆ. ಅವನು ಲಿಂಗಪರಿವರ್ತನೆ ಮಾಡಿಕೊಳ್ಳುವ ಉದ್ದೇಶದಿಂದ ಮನೆ ಬಿಟ್ಟು ಬರುತ್ತಾನೆ. ಲಿಂಗಪರಿವರ್ತನೆಯ ತೊಂದರೆಗಳೇನು ಅನ್ನುವುದು ಆತನಿಗೆ ನಿಧಾನಕ್ಕೆ ಅರ್ಥವಾಗುತ್ತಾ ಹೋಗುತ್ತದೆ. ಹಿಜಡಾಗಳಿಗೆ ಯಾರೂ ಉದ್ಯೋಗವನ್ನು ಕೊಡದೇ ಇರುವುದರಿಂದ ಆತ ಜೀವನಕ್ಕಾಗಿ ಭಿಕ್ಷಾಟನೆ ಮಾಡಬೇಕಾಗುತ್ತದೆ. ಆದರೂ ಕೂಡ ಮಾದೇಶ ವಿದ್ಯಾ ಆಗಿ ಪರಿವರ್ತಿತನಾಗುತ್ತಾನೆ. ಆದರೆ, ಮಾದೇಶ ವಿದ್ಯಾ ಆಗಿ ಪರಿವರ್ತಿತನಾದ ನಂತರದ ಜೀವನವನ್ನು ಹಾಗೂ ಒಂದು ಘನೆತೆಯ ಬದುಕಿಗಾಗಿ ಆಗೆ ಹೇಗೆ ಹೋರಾಡುತ್ತಾಳೆ ಎನ್ನುವುದನ್ನುಈ ಕೃತಿ ತೋರಿಸುತ್ತದೆ.
©2024 Book Brahma Private Limited.