ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠಾಗೋರ್ ಅವರ ಜೀವನ ಗಾಥೆ ಹಾಗೂ ಸಾಹಿತ್ಯ ಸಾಧನೆ ಕುರಿತ ಗ್ರಂಥ-ಸಾಧನಾ. ಸ್ವತಃ ರವೀಂದ್ರನಾಥರೇ ಬರೆದ ಆತ್ಮಕಥೆ. ಈ ಕೃತಿಯನ್ನು ಮಹಿಪಾಲ ದೇಸಾಯಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕವಿಯ ಅಂಕಿತನಾಮ ಗುರುದೇವ. ಇವರ `ಜನ ಗಣ ಮನ` ಭಾರತದ ರಾಷ್ಟ್ರ ಗೀತೆಯಾಗಿದ್ದರೆ, `ಅಮರ್ ಶೋನರ್ ಬಾಂಗ್ಲಾ` ಇದು ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ. ಭಾರತ ಸಾಹಿತ್ಯದ ಸಾಂಪ್ರದಾಯಿಕತೆಯನ್ನು ದಾಟಿ ವಿನೂತನವಾದ ವೈಚಾರಿಕ ಸಂಪ್ರದಾಯವೊಂದನ್ನು ನಿರ್ಮಿಸಿದ ಕೀರ್ತಿ ರವೀಂದ್ರನಾಥರಿಗೆ ಸೇರಿದ್ದು.
ಗೀತಾಂಜಲಿ ಸಂಕಲನದಲ್ಲಿಯ ಇವರ ಗೀತೆಗಳು ಪ್ರಕೃತಿ-ಸೌಂದರ್ಯ, ಜೀವನ ಮೌಲ್ಯಗಳು, ಆದರ್ಶಗಳನ್ನು ಎತ್ತಿ ಹಿಡಿದು, ಓದುಗನ ಮನದಲ್ಲಿ ಪರಿಶುದ್ಧತೆಯ ಭಾವವನ್ನು ತುಂಬುತ್ತವೆ. ವಿಶ್ವ ಮಾನವ ಸಂದೇಶದೊಂದಿಗೆ ಬದುಕಿದ ಅವರ ಜೀವನ ಹಾಘೂ ಸಾಹಿತ್ಯದಲ್ಲಿಯೂ ಇದೇ ಮೌಲ್ಯವನ್ನು ಸಾರಿದ ಅವರ ಸಂದೇಶ ಸಕಲ ಜೀವರಾಶಿಗೂ ಪ್ರೇಮದಿಂದ ಕಾನುವಂತೆ ಪ್ರೇರೇಪಿಸುವಂತದ್ದಾಗಿದೆ.
©2024 Book Brahma Private Limited.