ಖ್ಯಾತ ಅನುವಾದಕ ಚಂದ್ರಕಾಂತ ಪೋಕಳೆ ಅವರು ಲೇಖಕ ಪ್ರಕಾಶ ಆಮ್ಟೆ ಅವರ ಮರಾಠಿ ಮೂಲದ ಆತ್ಮಕಥೆಯನ್ನು ‘ಪ್ರಕಾಶ ಮಾರ್ಗ ’ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಉತ್ತಮ ಕಾಗದಗಳನ್ನು ಬಳಸಿ ತುಂಬಾ ಆಕರ್ಷಕವಾಗಿ ಮುದ್ರಿಸಲಾಗಿದೆ. ತಂದೆ ಬಾಬಾ ಆಮ್ಟೆ ಅವರ ಕಠಿಣತಮವಾದ ಸೇವಾ ಮಾರ್ಗದಲ್ಲಿ ಎದುರಿಸಿದ ಸವಾಲುಗಳು, ಹಿಂಸೆ, ಅಪಮಾನಗಳನ್ನು ಇಲ್ಲಿ ದಾಖಲಿಸಲಾಗಿದೆ. ಮಹಾರಾಷ್ಟ್ರದ ಗಡಚಿರೋಲಿಯ ಹೇಮಲ್ಕಸ್ ಬುಡಕಟ್ಟು ಜನಾಂಗದಲ್ಲಿ ಅಭಿವೃದ್ಧಿ ತರುವಲ್ಲಿಯ ಶ್ರಮವನ್ನು ವಿಶೇಷವಾಗಿ ಚಿತ್ರಿಸಲಾಗಿದೆ. ಜೊತೆಗೆ, ಬಾಬಾ ಆಮ್ಟೆ ಅವರ ಸೇವಾ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಪರಿಚಯಿಸುವ ಕೃತಿಯೂ ಇದಾಗಿದೆ.
©2024 Book Brahma Private Limited.