ಹೆಲನ್ ಕೆಲರ್ ಅವರು ಇಂಗ್ಲಿಷ್ ನಲ್ಲಿ ಬರೆದ ತಮ್ಮ ಆತ್ಮಕಥೆಯನ್ನು ಲೇಖಕಿ ಶ್ರುತಿ ಬಿ.ಎಸ್. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲನೆಯ ಭಾಗ ಹೆಲೆನ್ ಕೆಲರ್ ಬರೆದ ತನ್ನ ಬದುಕಿನ ಕಥೆ, ಎರಡನೆಯ ಭಾಗ ಆಕೆಯ ಪತ್ರಗಳು. ಇವೆರಡೂ ಭಾಗಗಳು ಆಕೆಯ ಬದುಕನ್ನು ನಮ್ಮ ಮುಂದೆ ತೆರೆದಿಡುತ್ತದೆ. ಆಕೆಯ ಶಿಕ್ಷಣದ ಕುರಿತು ಆಕೆಯೇ ಸ್ವತಃ ಎಲ್ಲವನ್ನೂ ವಿವರಿಸಲಾಗುವುದಿಲ್ಲ, ಆದರೆ ಅದೂ ಕೂಡ ಆಕೆಯ ಬದುಕಿನ ಪ್ರಮುಖ ಭಾಗವೇ ಆಗಿದ್ದು, ಮಿಸ್. ಸಲ್ಲಿವನ್ ಅವರ ಪತ್ರಗಳು ಹಾಗೂ ವರದಿಗಳ ಮೂಲಕ ಮೂರನೆಯ ಭಾಗದಲ್ಲಿ ಅವುಗಳನ್ನು ಚರ್ಚಿಸಲಾಗಿದೆ. ಜೊತೆಗೆ ಆಕೆಯ ವ್ಯಕ್ತಿತ್ವ ಹಾಗೂ ಸಾಧನೆಗಳ, ಮಿಸ್. ಸಲ್ಲಿವನ್ ಅವರ ಕಾರ್ಯಗಳ ಕುರಿತು ಕೂಡ ಮೂರನೆಯ ಭಾಗದಲ್ಲಿ ವಿವರಿಸಲಾಗಿದೆ.
ಮೂರನೆಯ ಭಾಗದಲ್ಲಿ ಅಧಿಕೃತ ದಾಖಲೆಗಳ ಹಾಗೂ ಮಿಸ್. ಸಲ್ಲಿವನ್ ಅವರ ಮಾರ್ಗದರ್ಶನದ ಮೇರೆಗೆ ವಿಷಯಗಳನ್ನು ನೀಡಲಾಗಿದೆ. ಮುಖ್ಯವಾಗಿ ಮಿಸಸ್. ಲಾರೆನ್ಸ್ ಹಟ್ಟನ್ ಅವರು ತಮ್ಮ ಸಂಗ್ರಹದಲ್ಲಿದ್ದ ಅನೇಕ ಪತ್ರಗಳನ್ನು ಹಂಚಿಕೊAಡಿದ್ದಾರೆ. ವೋಲ್ಟಾ ಬ್ಯೂರೋ ನಿರ್ವಾಹಕ ಮಿ. ಜಾನ್ ಹಿಟ್ಸ್ ಹಾಗೂ ಮಿಸಸ್. ಸೋಫಿಯಾ ಸಿ. ಹಾಪ್ಕಿನ್ಸ್ ಅವರಿಗೆ ಮಿಸ್. ಸಲ್ಲಿವನ್ ಅನೇಕ ಪತ್ರಗಳನ್ನು ಬರೆದಿದ್ದು, ಹೆಲೆನ್ ಗೆ ನೀಡಿದ ಶಿಕ್ಷಣದ ಮೇಲೆ ಬೆಳಕು ಚೆಲ್ಲುವಂತಿದೆ. ‘ಓವರ್ ದ ಟೀ ಕಪ್ಸ್’ನಲ್ಲಿ ಪ್ರಕಟವಾಗಿದ್ದ, ಹೆಲೆನ್ ಡಾ. ಹೋಲ್ಮ್ಸ್ ಅವರಿಗೆ ಬರೆದ ಪತ್ರವನ್ನು ಮಿ. ಹಾಟನ್, ಮಿ. ಮಿಫ್ಲಿನ್ ಹಾಗೂ ಕಂಪನಿ ನೀಡಿದ್ದನ್ನು ಇಲ್ಲಿ ದಾಖಲಿಸಲಾಗಿದೆ.
©2024 Book Brahma Private Limited.