‘ವಿಕ್ಟರ್ ಫ್ರಾಂಕಲ್’ ವೈ.ಜಿ. ಮುರಳೀಧರನ್ ಅವರ ಮನೋವೈದ್ಯನೊಬ್ಬನ ಭಾವಪೂರ್ಣ ಕಥನವಾಗಿದೆ. ಇದಕ್ಕೆ ಪ್ರೊ. ಎಂ. ಶ್ರೀಧರಮೂರ್ತಿ ಅವರ ಬೆನ್ನುಡಿ ಬರಹವಿದೆ; ಇದೊಂದು ಅಪರೂಪದ ಮನೋವೈದ್ಯನ ಭಾವಪೂರ್ಣ ಕಥನ. ತನ್ನ ಜೀವನದ ಮುಖ್ಯ ಹಂತದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿ ತನ್ನ ಕುಟುಂಬದ ಸಮಸ್ತರನ್ನು ಕಳೆದುಕೊಂಡು 'ಪ್ರೇಮದ ಹಂಬಲವೇ ಮನುಷ್ಯನ ಅಂತಿಮ ಗುರಿ' ಎಂಬ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಬದುಕಿದ ಸಂತನ ಕಥೆ. ನಾಜಿ ಯಾತನಾ ಶಿಬಿರಗಳಲ್ಲಿ ಸ್ವತ: ತಾನೇ ಸಂಕಟ, ನೋವು ದುಮ್ಮಾನಗಳನ್ನು ಅನುಭವಿಸುತ್ತಾ ತನ್ನ ವೃತ್ತಿಧರ್ಮದಿಂದ ಕಿಂಚಿತ್ತೂ ವಿಮುಖನಾಗದೆ ಮನುಷ್ಯನ ಪ್ರೀತಿಯ ತೀವ್ರತೆ ಸಾವಿನಷ್ಟೇ ಬಲವಾದದ್ದೆಂದು ನಂಬಿದ್ದ ಹಾಗೂ ತನ್ನ ಬದುಕಿನ ಮೂಲಕ ಜಗತ್ತಿಗೆ ತೋರಿಸಿದ ವೈದ್ಯನೊಬ್ಬನ ರೋಚಕ ಕಥೆ. ಈ ಕಥನದಲ್ಲಿ ಮನುಷ್ಯನ ವರ್ತನೆಯಲ್ಲಿರುವ ಹಿಂಸಾವಿನೋದ, ಔದಾರ್, ಅಸಹಾಯಕತೆ ಈ ಕೌರ, ಎಲ್ಲ ಆಯಾಮಗಳನ್ನು ಶ್ರೀ ಮುರಳೀಧರನ್ ಸರಳವಾಗಿ ಅನಾವರಣ ಗೊಳಿಸಿದ್ದಾರೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2024 Book Brahma Private Limited.