‘ಉಚಲ್ಯಾ’ ಮರಾಠಿಯ ಪ್ರಖ್ಯಾತ ಲೇಖಕ ಲಕ್ಷ್ಮಣ ಗಾಯಕವಾಡರ ಆತ್ಮಕತೆಯ ಕನ್ನಡಾನುವಾದ. ಚಂದ್ರಕಾಂತ ಪೋಕಳೆಯವರು ಉಚಲ್ಯಾವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದ ಲೇಖಕ ತನ್ನ ಜೀವನದ ಭೀಕರೆಯನ್ನು ಬಿಚ್ಚಿಟ್ಟ ಈ ಕೃತಿ ಅತ್ಯಂತ ಪ್ರಸಿದ್ಧ ಕೃತಿಯಾಗಿದೆ. ’ರಕ್ತ ಸುರಿಸಿ ದುಡಿಯುವ ಸಮುದಾಯದ ನಾನು ಸಮಾಜಮುಖಿ ಕಾರ್ಯಕರ್ತ. ನಾನು ಹುಟ್ಟಿದ ಸಮುದಾಯವನ್ನು ಸಮಾಜ ಮತ್ತು ವ್ಯವಸ್ಥೆ ತಿರಸ್ಕರಿಸಿತ್ತು. ಸಾವಿರಾರು ವರ್ಷಗಳಿಂದಲೂ ನಮ್ಮನ್ನು ಪ್ರಾಣಿಗಳಿಂತಲೂ ಕಡೆಯಾಗಿ ಕಾಣುವ ಸಮಾಜದಲ್ಲಿ ಪ್ರಾಣಿ ಸಮಾನಜೀವನ ನಡೆಸುಂತ ಸ್ಥಿತಿ ಇತ್ತು. ಬ್ರಿಟಿಷ್ ಸರ್ಕಾರವಂತೂ ನಮ್ಮ ಜಾತಿಗೆ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿಯನ್ನೇ ಹಚ್ಚಿತ್ತು ಎನ್ನುತ್ತಾರೆ’ ಅವರು.
ಬುಡಕಟ್ಟು ಸಮುದಾಯವೊಂದರ ಬದುಕಿನ ನರಕ ಸದೃಶ್ಯ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಉಚಲ್ಯಾ ಕೃತಿ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಮೂಲ ಕೃತಿಗೆ 1988ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇಂಥಹ ಮೌಲ್ಯಯುತ ಕೃತಿಯನ್ನು ಚಂದ್ರಕಾಂತ ಪೋಕಳೆಯವರು ಅಷ್ಟೇ ಸೂಕ್ಷ್ಮವಾಗಿ ಕನ್ನಡೀಕರಿಸಿದ್ದಾರೆ.
©2025 Book Brahma Private Limited.