ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರನಾಥ ಠಾಕೂರ ಅವರು ತಮ್ಮ ಬಾಲ್ಯ ಕಾಲದ ಹಾಗೂ ಜೀವನ ಸ್ಮೃತಿಗಳನ್ನು ದಾಖಲಿಸಿದ ಕೃತಿಯನ್ನು ಗೀತಾ ವಿಜಯಕುಮಾರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ರವೀಂದ್ರನಾಥರು ತಮ್ಮ ಎಳೆಯ ವಯಸ್ಸಿನ ನೆನಪುಗಳನ್ನು ಸುಂದರವಾಗಿ ದಾಖಲಿಸಿದ್ದು, ಅವರ ಸ್ಮರಣೆ ಸಾಮರ್ಥ್ಯದ ಸೂಚಕವಾಗಿದೆ. ಬಾಲ್ಯದ ನೆನಪುಗಳು-ಸನ್ನಿವೇಶಗಳು ಸಹ ಜೀವನದ ಉತ್ತಮ ಪಾಠಗಳಾಗುತ್ತವೆ ಎಂಬುದನ್ನು ಈ ಕೃತಿಯಿಂದ ತಿಳಿಯಬಹುದು. ಅನುವಾದವು ಸಹ ಉತ್ತಮವಾಗಿ ಮೂಡಿ ಬಂದಿದೆ.
©2025 Book Brahma Private Limited.