`ಮನುಸ್ಮೃತಿ’ ಬಿ.ಎಚ್. ಶ್ರೀಧರ ಅವರ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಆಧುನಿಕ ಮಾನವ ಜೀವನವು ಮಹತ್ವಪೂರ್ಣವಾದ ಪ್ರಗತಿಯ ಪಥದಲ್ಲಿ ಸಾಗುತ್ತಿರುವುದು ಸರ್ವವಿದಿತ ವಿಷಯವಾಗಿದೆ. ವೈಜ್ಞಾನಿಕ ಮನೋಭಾವ ಹಾಗೂ ತಾಂತ್ರಿಕ ಸಂಶೋಧನೆಗಳು ಈ ಪರಿವರ್ತನೆಯ ಪ್ರಮುಖ ಕಾರಣಗಳಾಗಿವೆ. ನೂತನ ವಿಜ್ಞಾನ ಬಿಡಿಸಿ, ತೋರುತ್ತಿರುವ ವಿಶ್ವದ ರಹಸ್ಯಗಳು, ಸಾಧಿಸಿರುವ ವಿಕ್ರಮಗಳು, ಪರಿಷ್ಕರಿಸುತ್ತಿರುವ ಪರಂಪರೆಯ ಮೌಲ್ಯಗಳು, ಈ ಹೊಸ ಬಾಳಿನ ತೋರಣವಾಗಿವೆ. ವಿಶ್ವ ಮಾನವ ಪ್ರಜ್ಞೆಯನ್ನು ಜಾಗೃತಗೊಳಿಸಿವೆ. ಈ ನೂತನ ಜ್ಞಾನ, ವ್ಯಕ್ತಿಜೀವಿತಕ್ಕೆ ಬೆಳಕು ನೀಡಿ, ಜನಾಂಗಗಳಲ್ಲಿ ಸಾಮರಸ್ಯ ಮೂಡಿಸಿ ಮಾನವ ಕೋಟಿಯ ಕಲ್ಯಾಣ ಸಾಧನೆಗೆ ಪ್ರೇರಕವಾಗಬೇಕಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಈ ದಿಸೆಯಲ್ಲಿ ತನ್ನ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ನೆರವೇರಿಸುತ್ತಾ ಬರುತ್ತಿರುವುದು ಗಮನಾರ್ಹವಾದದ್ದು.
ಮನುಸ್ಮೃತಿ ಕೃತಿಯ ಪರಿಚಯ(archive)
©2024 Book Brahma Private Limited.