ಮಾವಿನಮರದಲ್ಲಿ ಬಾಳೆಯ ಹಣ್ಣು

Author : ಕೆ.ವಿ. ಅಕ್ಷರ

Pages 196

₹ 185.00




Year of Publication: 2018
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ನಾಟಕಕಾರ, ನಿರ್ದೇಶಕ ಕೆ.ವಿ. ಅಕ್ಷರ ಅವರು ರಂಗಭೂಮಿ ಮತ್ತು ನಾಟಕ ಕುರಿತು ಬರೆದ ಲೇಖನಗಳ ಸಂಕಲನ ಇದು. ಗುಬ್ಬಿ ಕಂಪೆನಿಯ ರಾಮಾಯಣ ಪ್ರಯೋಗದ ಒಂದು ಉಲ್ಲೇಖದಿಂದ ಈ ವಿಚಿತ್ರ ಹೆಸರನ್ನು ಎತ್ತಿಕೊಳ್ಳಲಾಗಿದೆ. ಈ ಪುಸ್ತಕದಲ್ಲಿ ಕನ್ನಡ ರಂಗಭೂಮಿ ಮತ್ತು ನಾಟಕದ ಜಗತ್ತಿನೊಳಗೆ ಅಡಕವಾಗಿರುವ ವಿಚಿತ್ರ ಬಗೆಯ ಪರಸ್ಪರ ಸಂಬಂಧಗಳನ್ನೂ ಸಾಮ್ಯ-ಭಿನ್ನತೆಗಳನ್ನೂ ಅಂತರ್ ಪಠ್ಯೀಯತೆಯನ್ನೂ ಶೋಧಿಸುತ್ತದೆ. ಹಾಗೂ ಅದರ ಮೂಲಕವೇ ಆಧುನಿಕ ಕನ್ನಡ ರಂಗಭೂಮಿಯ ಒಂದು ವಿಶಿಷ್ಟ ಚಿತ್ರವನ್ನು ಕಟ್ಟಿಕೊಡುತ್ತದೆ. ಸಂಗ್ಯಾಬಾಳ್ಯಾ, ಸಂಸರ ನಾಟಕಗಳು, ಪುತಿನ ಅವರ `ಅಹಲ್ಯೆ?, ದ.ರಾ. ಬೇಂದ್ರೆ ಮತ್ತು ಪಿ. ಲಂಕೇಶ್ ಅವರ ನಾಟಕಗಳು - ಹೀಗೆ ಕನ್ನಡ ನಾಟಕದ ಬೇರೆಬೇರೆ ಬಗೆಗಳನ್ನು ಕುರಿತ ವಿಮರ್ಶಾತ್ಮಕ ಲೇಖನಗಳು ಈ ಪುಸ್ತಕದ ಒಂದು ಭಾಗದಲ್ಲಿವೆ. ಇನ್ನೊಂದು ಭಾಗದಲ್ಲಿ ಕನ್ನಡ ರಂಗಭೂಮಿಯ ಭೂತ-ವರ್ತಮಾನ-ಭವಿಷ್ಯಗಳನ್ನು ಕುರಿತ ಸುದೀರ್ಘ ಚಿಂತನೆಗಳಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆದ ಕೃತಿ.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books