ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ವಿರಳ ಪ್ರಕಾರವಾದ ಲಿಪಿಶಾಸ್ತ್ರದ ಬಗ್ಗೆ ಕೃತಿಗಳು ಅಲಭ್ಯವಿರುವ ಸಂದರ್ಭದಲ್ಲಿ ಡಾ. ದೇವರಕೊಂಡಾರೆಡ್ಡಿಯವರ ಈ ಕೃತಿ ಮೂಡಿ ಬಂದಿರುವುದೇ ಈ ಕೃತಿಯ ವಿಶೇಷತೆಯಾಗಿದೆ.ಲಿಪಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಅನೇಕ ವರ್ಷಗಳ ಆಳವಾದ ಅಭ್ಯಾಸದ ಫಲಶ್ರುತಿಯೇ ಈ ಕೃತಿ. ಅಪ್ಪಟ ಶಾಸ್ತ್ರಗ್ರಂಥವಾದ ಇದನ್ನು ಲಿಪಿಶಾಸ್ತ್ರದ ಬಗ್ಗೆ ಆಸಕ್ತಿಯುಳ್ಳ ಮತ್ತು ಕನ್ನಡದ ಬಗ್ಗೆ ಅಭಿಮಾನವುಳ್ಳ ಎಲ್ಲರಿಗೂ ಉಪಯುಕ್ತವಾದ ಕೃತಿಯಾಗಿದೆ.
©2024 Book Brahma Private Limited.