‘ಕರ್‍ನಾಟಕದ ಸ್ತಳೀಯ ಮಟ್ಟದಲ್ಲಿ ಬಾಶಾಪಸರಣ’ ಭಾಷಾತಜ್ಞ, ಲೇಖಕ ಬಸವರಾಜ ಕೋಡಗುಂಟಿ ಅವರು ಸಂಪಾದಿಸಿರುವ ಕೃತಿ. ಪುಸ್ತಕದ ಕುರಿತಾದ ಮಾಹಿತಿಯನ್ನು ಬೆನ್ನುಡಿಯಲ್ಲಿ ಸ್ಪಷ್ಟ ಪಡಿಸಿರುವ ಲೇಖಕರು ‘ಕರ್ನಾಟಕ ನಾಡೊಂದು, ಜಗ ಹಲವು. ಹಲವು ತಾನಗಳು ಹೆಣೆದುಕೊಂಡು ಕರ್ನಾಟಕವೆಂಬ ಇಂಪಾದ ಹಾಡನ್ನು ಎಲ್ಲೆಡೆ ಅನುರಣಿಸುತ್ತಿವೆ. ಈ ಅಮೃತದ ಸವಿಯೊಂದು ಪಾಕಗೊಳಲು ಎಚ್ಚವಾಗಿ ಕುದ್ದ ಬಾಶೆಗಳ ಪಸರಿಕೆಯನ್ನು ತಳಮಟ್ಟದಲ್ಲಿ ಈ ಪುಸ್ತಕ ತೋರಿಸುತ್ತದೆ’ ಎಂದಿದ್ದಾರೆ.
ಹಾಗೇ ಇದರಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳ ಆಯ್ದ ತಾಲೂಕಿನ ಜನಗಣತಿ ಕೊಟ್ಟ ಮಾಹಿತಿಯನ್ನು ತೆಗೆದುಕೊಂಡು ವಿಶ್ಲೇಶಿಸಿ ಸ್ಥಳೀಯ ಹಂತದಲ್ಲಿ ಇರುವ ಬಾಶೆಗಳು ಮತ್ತು ಅವುಗಳ ಪಸರಿಕೆಯನ್ನು ತೋರಿಸುವ ಪ್ರಯತ್ನ ಮಾಡಿದೆ. ಒಂದು ತಾಲೂಕಿನ ಸಣ್ಣ ಭೂಗೋಳಿಕ ವ್ಯಾಪ್ತಿಯಲ್ಲಿ ಎಷ್ಟು ಭಾಷೆಗಳಿರಬಹುದು, ಇಲ್ಲಿ ಪ್ರತಿಯೊಬ್ಬರೂ ಕಣ್ಣರಳಿಸುವ ಮಾಹಿತಿ ಕಾಣಿಸುತ್ತದೆ.
ತಾಯ್ಮಾತಿಕ ಶಿಕ್ಷಣ, ಸರಕಾರದ ವಿವಿದ ಬಾಶಾ ಸಂಬಂಧಿ-ಭಾಷೆಯನ್ನು ಒಳಗೊಳ್ಳುವ ಪಾಲಸಿಗಳು, ಕಾನೂನುದಳು, ಸಾಮಾಜಿಕ ಮಾಧ್ಯಮ ಒಳಗೊಂಡು ಇತರೇತರ ಸಾಮಾಜಿಕ ಚಟುವಟಿಕೆಗಳು, ವಿಭಿನ್ನ ಜ್ಞಾನಶಿಸ್ತುಗಳಲ್ಲಿನ ಆರಯ್ಪುಗಳು ಮೊದಲಾದವುಗಳಿಗೆ ಈ ಪುಸ್ತಕ ಆಕರ ಒದಗಿಸುತ್ತದೆ. ಸರಕಾರ ಬಾಶಾನೀತಿಯೊಂದನ್ನು ರೂಪಿಸುವ ಅವಶ್ಯಕತೆಯನ್ನು, ಬಾಶಾಸರ್ವೆ ನಡೆಸಬೇಕಾದ ಅವಶ್ಯಕತೆಯನ್ನು ಈ ಪುಸ್ತಕ ತೋರಿಸುತ್ತದೆ. ಜೊತೆಗೆ ಬಾಶಾ ಸಮಾನತೆಯನ್ನು ಅರಿತುಕೊಳ್ಳಬೇಕಾದ, ಅನುಸರಿಸಬೇಕಾದ ಸಂವಿದಾನದತ್ತ ವಿಚಾರದೆಡೆಗೆ ಗಮನ ಸೆಳೆಯುತ್ತದೆ.
©2024 Book Brahma Private Limited.