ಕನ್ನಡ ರಂಗಭೂಮಿಯಲ್ಲಿ ಹಾಸ್ಯ

Author : ಎಂ.ಎಸ್ ವಿದ್ಯಾ

Pages 376

₹ 300.00




Year of Publication: 2020
Published by: ಚಾರುಮತಿ ಪ್ರಕಾಶನ
Address: #224, 4ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: 9448235553

Synopsys

ಲೇಖಕಿ ಎಂ.ಎಸ್. ವಿದ್ಯಾ ಅವರ ‘ಕನ್ನಡ ರಂಗಭೂಮಿಯಲ್ಲಿ ಹಾಸ್ಯ’( ಸಾಹಿತ್ಯ ಮತ್ತು ಪ್ರಯೋಗ) ಕೃತಿಯು ಸಂಶೋಧನಾ ಪ್ರಬಂಧವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಬಿ. ವಿ. ರಾಜಾರಾಂ ಅವರು, ಈ ಕೃತಿಯು ಹಾಸ್ಯರಸದ ಚಿಂತನೆ, ಅದರ ವ್ಯಾಪ್ತಿ ಮತ್ತು ಉಗಮ ಬೆಳವಣಿಗೆ ಹೀಗೆ ಹಲವು ಹಂತಗಳ ಅಧ್ಯಯನಕ್ಕೆ ಒಳಗಾಗಿದೆ. ಈ ತರಹದ ಒಂದು ಶಿಸ್ತೀಯ ಅಧ್ಯಯನ ಮತ್ತು ಬರವಣಿಗೆಯ ಅಗತ್ಯ ಇತ್ತು. ಅದು ಇಲ್ಲಿ ಸಫಲತೆ ಕಂಡಿದೆ. ವಿಸ್ತಾರದ ಓದು , ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಮಂಡಿಸಿರುವುದು ಇಲ್ಲಿ ಕಂಡುಬರುತ್ತದೆ. ಅಂತೆಯೇ, ಆಧುನಿಕ ರಂಗಪ್ರಯೋಗಾಸಕ್ತರಿಗೆ ಗೊತ್ತಿಲ್ಲದ ಅದೆಷ್ಟೋ ನಾಟಕ ಕೃತಿಗಳ ನಾಟಕಕಾರರ ಹೆಸರುಗಳು ಕೂಡ ಇಲ್ಲಿ ಕಾಣಸಿಗುತ್ತವೆ. ನಾಟಕಕಾರರು, ನಾಟಕ ಕೃತಿಗಳು, ರಂಗಪ್ರಯೋಗಗಳು, ರಂಗತಂಡಗಳು, ನಟರು, ನಟಿಯರು, ನಿರ್ದೇಶಕರು, ಆಯಾ ಕಾಲದಲ್ಲಿ ರಂಗ ಬೆಳೆದು ಬಂದ ರೀತಿಗಳನ್ನು ಸಹ ಇವುಗಳಿಂದ ನೋಡಬಹುದು. ರಂಗಭೂಮಿಯ ಜನಪದ ರಂಗ, ವೃತ್ತಿರಂಗಗಳ ಸಾಕಷ್ಟು ನಾಟಕ ಪ್ರಯೋಗಗಳ ವಿವೇಚನೆಯೂ ಇಲ್ಲಿ ಕಂಡುಬರುತ್ತದೆ. ಮಕ್ಕಳ ನಾಟಕ ಪ್ರಯೋಗಗಳು, ಮಹಿಳಾ ರಂಗದ ನಟನೆ-ಸಂಘಟನೆ-ರಚನೆ ಮತ್ತು ಪ್ರಯೋಗಗಳ ಬಗೆಯೂ ಮಾಹಿತಿ ಇದೆ. ಅಸಂಗತ,ನವ್ಯ ರಚನೆಯ ಪ್ರಯೋಗಳ ಚಿಂತನೆಯೂ ಇದೆ. ರಂಗ ಶಿಕ್ಷಣ, ರಂಗ ತರಬೇತಿ, ಸುಶಿಕ್ಷಿತ ನಾಟಕಕಾರ, ಪ್ರೇಕ್ಷಕ, ನಿರ್ದೇಶಕ, ಸಂಘಟಕ ಹೀಗೆ ಹವ್ಯಾಸಿ ರಂಗಭೂಮಿಯ ಬೆಳವಣಿಗೆಯ ಹಂತಗಳನ್ನು ಈ ಕೃತಿಯಲ್ಲಿ ಗುರುತಿಸಲಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಎಂ.ಎಸ್ ವಿದ್ಯಾ

ಲೇಖಕಿ ಎಂ.ಎಸ್ ವಿದ್ಯಾ ಅವರು ಮೂಲತಃ ಬೆಂಗಳೂರಿನವರು. ಖ್ಯಾತ ನಟಿ ಹಾಗೂ ಬರಹಗಾರರು. ಪ್ರಸ್ತುತ ಬೆಂಗಳೂರಿನ ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾರೆ.  ಕೃತಿಗಳು: ಕನ್ನಡ ರಂಗಭೂಮಿಯಲ್ಲಿ ಹಾಸ್ಯ, ...

READ MORE

Related Books