ಕನ್ನಡದಲ್ಲಿ ಸೇರಿರುವ ಅರಬ್ಬಿ ಪರ್ಶಿಯಾ ಭಾಷಾ ಪದಗಳು

Author : ಕೃಷ್ಣ ಕೊಲ್ಹಾರ ಕುಲಕರ್ಣಿ

Pages 172

₹ 170.00




Year of Publication: 2022
Published by: ಸಮನ್ವಿತ ಪ್ರಕಾಶನ
Address: #೧೨, ೧ನೆ ಅಡ್ಡರಸ್ತೆ, ಮಂಜುನಾಥ ಲೇಔಟ್, ಅರಕೆರೆ ಮೈಕೋ ಲೇಔಟ್ ಹಿಂಭಾಗ, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560076
Phone: 9844192952

Synopsys

ಕನ್ನಡದಲ್ಲಿ ಸೇರಿರುವ ಅರಬ್ಬಿ ಪರ್ಶಿಯಾ ಭಾಷಾ ಪದಗಳು ಕೃಷ್ಣಕೊಲ್ಹಾರ ಕುಲಕರ್ಣಿ ಅವರ ಕೃತಿಯಾಗಿದೆ. ಕರ್ನಾಟಕವನ್ನು ಸುಲ್ತಾನರು ಮತ್ತು ನವಾಬರು ನಮ್ಮೆಲ್ಲರಿಗೂ ಗೊತ್ತಿರುವಂತೆ ಶತಮಾನಗಳ ಕಾಲ ಆಳಿದರು. ಅವರ ಆಡಳಿತ ಪ್ರಭಾವದಿಂದಾಗಿ ಕನ್ನಡ ಭಾಷೆಯಲ್ಲಿ ಸೇರಿಕೊಂಡ ಅನೇಕ ಅರಬ್ಬಿ ಮತ್ತು ಪರ್ಷಿಯಾ ಪದಗಳನ್ನು ಕೃಷ್ಣಕೊಲ್ಹಾರ ಕುಲಕರ್ಣಿಯವರು ಸಂಗ್ರಹಿಸಿದ್ದಾರೆ.

About the Author

ಕೃಷ್ಣ ಕೊಲ್ಹಾರ ಕುಲಕರ್ಣಿ
(16 October 1940)

ಕೇಂದ್ರ ಸರ್ಕಾರದ ಪ್ರಸಾರ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಡಾ. ಕೃಷ್ಣಕೊಲ್ಲಾರ ಕುಲಕರ್ಣಿ ಅವರು ಇತಿಹಾಸ-ಸಂಶೋಧನೆಗಳಲ್ಲಿ ವಿಶೇಷ ಆಸಕ್ತಿ ಉಳ್ಳವರು. ಬಿಜಾಪುರ ಜಿಲ್ಲೆಯ ಕೋಲ್ಹಾರದವರಾದ ಅವರು ಕಾದಂಬರಿ, ನಾಟಕ ಜೀವನ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಆದಿಲ್‌ ಷಾಹಿ ಕಾಲದ ಪಠ್ಯಗಳ ಕನ್ನಡ ಅನುವಾದ ಯೋಜನೆಯ ಸಂಪಾದಕರಾಗಿದ್ದರು. ಸಿಂದಗಿಯ ಬಿಂದಗಿ, ಕರ್ನಾಟಕ ವೈಭವ ವಾರಪತ್ರಿಕೆ, ಮಾಧ್ವಮಠಗಳು, ಆದಿಲ್‌ಶಾಹಿ ಆಸ್ಥಾನದ ಸಾಹಿತ್ಯ (ಸಂಶೋಧನೆ), ಮಹಿಮಾಪತಿರಾಯರ ಕೀರ್ತನೆಗಳು, ಕೃಷ್ಣದಾಸರ ಕೀರ್ತನೆಗಳು, ತಿಂಮಾಯಣ, ಶ್ರೀಸತ್ಯಧ್ಯಾನದರ್ಶನ (ಸಂಪಾದನೆ), ರತ್ನಾಕರ, ಮನೆ ಮುಳುಗಿತು (ಕಾದಂಬರಿ), ದಾಸ ಮಹಿಪತಿ, ದಾಸ ಜಗನ್ನಾಥ, ಮನುಕುಲ ಒಂದೇ (ನಾಟಕಗಳು), ಜ್ಞಾನಾರ್ಜನೆ (ಸಣ್ಣ ಕಥೆ) ಪ್ರಕಟಿತ ಕೃತಿಗಳು. ಅವರು ಗಮಕ ಕಲಾ ಪರಿಷತ್ತಿಗೆ ಅಧ್ಯಕ್ಷರಾಗಿದ್ದರು (2006).  ...

READ MORE

Related Books