ಕನ್ನಡ ಭಾಷಾಲೋಕ ಮತ್ತು ಪೂರಕ ಸಾಹಿತ್ಯ

Author : ಸಾ.ಶಿ. ಮರುಳಯ್ಯ

Pages 440

₹ 239.00




Year of Publication: 2016
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಖ್ಯಾತ ಸಾಹಿತಿ ಡಾ. ಸಾ>ಶಿ. ಮರುಳಯ್ಯ ಅವರ ಕೃತಿ-ಕನ್ನಡ ಭಾಷಾಲೋಕ ಮತ್ತು ಪೂರಕ ಸಾಹಿತ್ಯ. ಅತ್ಯಂತ ಪ್ರಾಚೀನವಾದ ಕನ್ನಡ ಭಾಷೆಯ ಅವಲೋಕನ ಮಾತ್ರವಲ್ಲ; ಪೂರಕವಾಗಿ ಬರುವ ಎಲ್ಲ ಭಾಷೆಯ ಸಾಹಿತ್ಯವನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಕನ್ನಡ ಭಾಷೆಯ ಸಂಶೋಧನೆಗೆ ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ.

About the Author

ಸಾ.ಶಿ. ಮರುಳಯ್ಯ
(28 January 1931 - 05 February 2016)

ಕವಿ, ವಿಮರ್ಶಕ, ಸಂಶೋಧಕ ಸಾ.ಶಿ. ಮರುಳಯ್ಯ ಅವರು ಜನಿಸಿದ್ದು 1931 ಜನವರಿ 28ರಮದು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಸಾಸಲು ಗ್ರಾಮದವರು. ತಾಯಿ ಸಿದ್ದಮ್ಮ, ತಂದೆ ಶಿವರುದ್ರಯ್ಯ. ಪ್ರಾಥಮಿಕ ಶಿಕ್ಷಣ ಪಡೆದದ್ದು ಚಿತ್ರದುರ್ಗದಲ್ಲಿ.  ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ವಿಷಯ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದರು. ಅಧ್ಯಾಪಕರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಶಿವತಾಂಡವ, ವಿಪರ್ಯಾಸ, ಘೋಷವತಿ, ರೂಪಸಿ, ಚೈತ್ರ- ಜ್ಯೋತಿ, ಬೃಂದಾವನ ಲೀಲೆ, ನನ್ನ ಕವನಗಳು(ಕವನ ಸಂಕಲನಗಳು), ಹೇಮಕೂಟ, ...

READ MORE

Related Books