ಕಗ್ಗ ರಸಧಾರೆ ಸಂಪುಟ-2

Author : ರವಿ ತಿರುಮಲೈ

Pages 302

₹ 225.00




Year of Publication: 2014
Published by: ವಿಜಯರವಿ ಪ್ರಕಾಶನ
Address: ಬೆಂಗಳೂರು

Synopsys

‘ಡಿ.ವಿ.ಜಿ.’ ಎಂದೇ ಖ್ಯಾತಿಯ ಡಾ. ಡಿ.ವಿ. ಗುಂಡಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ದ ರಸಧಾರೆಯ ಸಂಪುಟ-2-ಈ ಕೃತಿ. ‘ಕಗ್ಗ’ ವಾಙ್ಮಯಕ್ಕೆ ಲೇಖಕ ರವಿ ತಿರುಮಲೈ ರಚಿಸಿರುವ ‘ಕಗ್ಗ ರಸಧಾರೆ’ ಸೇರ್ಪಡೆಯಾಗುತ್ತಿದೆ. ಪ್ರತಿ ಕಗ್ಗಕ್ಕೂ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ನೀಡಲಾಗಿದ್ದು, ಕಗ್ಗದ ರಸಧಾರೆಯು ಮತ್ತಷ್ಟು ಧುಮ್ಮಿಕ್ಕುವಂತೆ ರಭಸ ನೀಡಿದ್ದಾರೆ. ಈ ಸತ್ತ್ವವಂತಿಕೆಯ ಕಾರಣದಿಂದ ‘ಕಗ್ಗ’ವನ್ನು ಕುರಿತು ಈಗಾಗಲೇ ಹಲವಾರು ಕೃತಿಗಳು ಹೊರಬಂದಿದ್ದರೂ ನೂತನ ಅರ್ಥಶೋಧಗಳಿಗೆ ಸದಾ ಅವಕಾಶ ಉಳಿದೇ ಇರುತ್ತದೆ. ಪ್ರಸ್ತುತ ‘ಕಗ್ಗ ರಸಧಾರೆ’ ವ್ಯಾಖ್ಯಾನ ಕೃತಿಯಲ್ಲಿ ಶ್ರೀ ರವಿ ತಿರುಮಲೈ ಅವರು ಒಂದು ವಿನೂತನ ಪ್ರಸ್ಥಾನವನ್ನು ಸಂಯೋಜಿಸಲು ಯತ್ನಿಸಿದ್ದಾರೆ. ಇಲ್ಲಿ ಪ್ರತಿ ಪದ್ಯದ ಪದವಿಭಾಗ, ಅಲ್ಲಲ್ಲಿ ಕಠಿಣ ಶಬ್ದಾರ್ಥ ಇದ್ದು ಅನಂತರ ಇಂಗಿತಾರ್ಥದ ವ್ಯಾಖ್ಯೆ ಇದೆ. ಓದಿದಷ್ಟು, ತಿಳಿದಷ್ಟು ಕಗ್ಗದ ಪಕ್ವತೆ ಹೆಚ್ಚುತ್ತಿದೆ. ಉತ್ತಮ ಸಾಹಿತ್ಯದ ಸಾಲಿನಲ್ಲಿ ಕಗ್ಗಕ್ಕೊಂದು ವಿಶಿಷ್ಟ ಸ್ಥಾನವಿದೆ. ಹೀಗೆ ‘ಕಗ್ಗ’ದ ಪದ್ಯಗಳ ಆಶಯದ ತಳಹದಿಯಾಗಿರುವ ಸತರ್ಕ ಚಿಂತನ ವಿನ್ಯಾಸದ ಹಂತಗಳನ್ನು ಸ್ಫುಟಗೊಳಿಸುವ ರೀತಿಯಲ್ಲಿ ಪ್ರಕೃತ ‘ಕಗ್ಗ-ರಸಧಾರೆ’ ವ್ಯಾಖ್ಯಾನವು ರೂಪುಗೊಂಡಿದೆ. 

About the Author

ರವಿ ತಿರುಮಲೈ

ಮೂಲತಃ ಕೋಲಾರ ಜಿಲ್ಲೆಯವರಾದ ರವಿ ತಿರುಮಲೈ ಅವರು ವಾಣಿಜ್ಯ ಪದವಿ ಪಡೆದು ಎರಡು ದಶಕಗಳ ಕಾಲ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪ್ರೇಮ ಇವರ ನಿರಂತರ ಅಧ್ಯಯನ, ಅನುವಾದ ಕಾರ್ಯ, ಕವನ ರಚನೆ, ರಂಗಭೂಮಿ, ಹಳೆಯ ಚಿತ್ರ ಸಂಗೀತ ಹೀಗೆ ವೈವಿಧ್ಯಮಯ ಆಸಕ್ತಿಯನ್ನು ತಳೆದವರು. ಸಾಹಿತಿ ಡಿ.ವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗ ಕುರಿತಾದ ವ್ಯಾಖ್ಯಾನಗಳನ್ನು ಮೂರು ಬೃಹತ್ ಸಂಪುಟಗಳಲ್ಲಿ ’ ಕಗ್ಗ ರಸಧಾರೆ’ ಎಂಬ ಶೀರ್ಷಿಕೆಯಡಿ ಹೊರತಂದಿದ್ದಾರೆ.  ವ್ಯಾಖ್ಯಾನ, ಚಿಂತನೆಗಳ ಕುರಿತಾದ ಇವರ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.   ...

READ MORE

Related Books