‘ಜನಪರ ರಂಗಭೂಮಿ’ ಲೇಖಕ ಗುಡಿಹಳ್ಳಿ ನಾಗರಾಜ ಅವರ ಕೃತಿ. ಕನ್ನಡ ರಂಗಭೂಮಿಯ ನಿಕಟ ನಂಟನ್ನು ಹೊಂದಿರುವ ಲೇಖಕರು, ರಂಗ ವಿಮರ್ಶೆ, ವಿಶ್ಲೇಷಣೆ ಹಾಗೂ ನಿರ್ಲಕ್ಷಿತ ಪ್ರತಿಭೆಗಳ ಕುರಿತು ನಿರಂತರವಾಗಿ ಬರೆಯುವ ಹಾಗೂ ಅನೇಕರಿಂದ ಬರೆಯಿಸುವ ಮೂಲಕ ಕನ್ನಡ ರಂಗಚಳವಳಿಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಜನಪರ ರಂಗಭೂಮಿ ಎಂಬ ಪುಸ್ತಕ ಜನಪರ ಚಳವಳಿಗಳು ಮತ್ತು ಕನ್ನಡ ರಂಗಭೂಮಿ ಮುಖಾಮುಖಿಯಾದ ಸ್ವರೂಪವನ್ನು ಚಿತ್ರಿಸಲು ಪ್ರಯತ್ನಿಸಿದೆ. ಇದರ ಭಾಗವಾಗಿ ಇಲ್ಲಿ ನಾಲ್ಕು ಅಧ್ಯಾಯಗಳು ಮೈದಳೆದಿವೆ. ಸ್ವಾತಂತ್ಯ್ರ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ ಮತ್ತು ಬೀದಿನಾಟಕ ಚಳವಳಿಗಳು ಕ್ರಮವಾಗಿ ಮೊದಲ, ಎರಡನೆಯ, ಮೂರನೆಯ, ನಾಲ್ಕನೆಯ ಅಧ್ಯಾಯಗಳಲ್ಲಿ ಚರ್ಚೆಗೆ ಒಳಗಾಗಿವೆ. ಈ ಕೃತಿಯಲ್ಲಿ ವೃತ್ತಿರಂಗಭೂಮಿ ಮತ್ತು ಜನಪರ ಚಳವಳಿಗಳು ಕರ್ನಾಟಕದ ಸಂದರ್ಭದಲ್ಲಿ ಮುಖಾಮುಖಿಯಾದ ಆದರ್ಶದ ಬಗೆಯನ್ನು ಲೇಖಕರು ಅನಾವರಣಗೊಳಿಸಿದ್ದಾರೆ.
©2024 Book Brahma Private Limited.