ಹಳಗನ್ನಡ ಸಾಹಿತ್ಯದ ಕುರಿತು ಲೇಖಕರು ಸಂಶೋದನೆ ನಡೆಸಿ, ಹಳಗನ್ನಡ ಸಾಹಿತ್ಯದ ಅನುಸಂಧಾನ ಕುರಿತುಬರೆದಿದ್ದಾರೆ. ಈ ಕೃತಿಯಲ್ಲಿ ಹಳಗನ್ನಡ ಕಾವ್ಯ-ಮಾರ್ಗ ಮತ್ತು ದೇಶಿ, ರನ್ನ ದಾಖಲಿಸಿದ ಚಾರಿತ್ರಿಕ ಸಂಗತಿಗಳು, ರನ್ನನ ಸುಯೋಧನ, ರನ್ನ ಚಿತ್ರಿಸಿರುವ ಚಾಲುಕ್ಯರ ವಂಶಾವಳಿ, ರನ್ನನ ಪರಿಸರದ ಇತಿಹಾಸ-ಸಂಸ್ಕೃತಿ ಚಿತ್ರಣ, ಶಾಸನ ಸಾಹಿತ್ಯದಲ್ಲಿ ಧರ್ಮ ಸಮನ್ವಯ, ಸಾಹಸ ಭೀಮವಿಜಯಂದಲ್ಲಿ - ಸತ್ಯಾಶ್ರಯ, ರನ್ನನು ಚಿತ್ರಿಸಿದ ಸಮಕಾಲೀನ ಮೌಲ್ಯಗಳು, ಹಳಗನ್ನಡದಲ್ಲಿ ಯುದ್ಧವಿರೋಧಿ ಮೌಲ್ಯಗಳು, ಕನ್ನಡ ಸಾಹಿತ್ಯ ಮತ್ತು ಧರ್ಮ ಸಾಮರಸ್ಯ ಅಧ್ಯಾಯಗಳ ಮೂಲಕ ಹಳಗನ್ನಡ ಸಾಹಿತ್ಯದ ಕುರಿತು ಚರ್ಚಿಸಿದ್ದಾರೆ.
©2024 Book Brahma Private Limited.