ಲೇಖಕ ಎಚ್.ಎ. ಅನಿಲ್ಕುಮಾರ್ ಅವರ ಲೇಖನ ಕೃತಿ ʻಕರೋನ ಕಾಲದ ಕಲಾ ಕೋವಿದರ ಈ-ಜಗತ್ತುʼ. ಇಡೀ ಜಗತ್ತನ್ನೇ ನಿಶ್ಯಬ್ದಮಾಡಿದ ಸಾಂಕ್ರಾಮಿಕ ವ್ಯಾಧಿ ಕೊರೋನಾ ಎಲ್ಲರನ್ನೂ ಒಂದೇ ರೀತಿ ಕಾಡಿಲಿಲ್ಲ. ಅಲೆ ಅಲೆಯಾಗಿ ಅಪ್ಪಳಿಸುತ್ತಲೇ ಹಲವು ರೀತಿಯಲ್ಲಿ ಜನರನ್ನು ಕಾಡಿದೆ. ದೃಶ್ಯ ಕಲಾವಿದರಿಗೆ ಇದು ಮೂಲಭೂತವಾದ ಅಗತ್ಯದ ಸಮಸ್ಯೆಗಿಂತಲೂ ಪ್ರಾಥಮಿಕ ಪ್ರೇರಣೆಯಾಗಿ, ಗೃಹಬಂಧನದ ಏಕಾಂಗಿತನದ ಸಮಸ್ಯೆಗಿಂತಲೂ, ಏಕಾಂಗಿತನದ ವರವಾಗಿ, ಸ್ಫೂರ್ತಿಯ ಸೆಲೆಯಾಗಿಯೂ ಒದಗಿಬಂದಿದೆ. ಈ ಹಿನ್ನೆಲೆಯಲ್ಲಿ, ಭೌಗೋಳಿಕವಾಗಿ ಕಲಾವಿದರಲ್ಲಿ ಇರುವ ಏಕತ್ರ-ವೈವಿಧ್ಯತೆಯ ಕುರಿತಾಗಿ ಅನಿಲ್ ಕುಮಾರ್ ಅವರು ಬರೆದ ಲೇಖನಗಳನ್ನು ಪುಸ್ತಕದಲ್ಲಿವೆ.
©2024 Book Brahma Private Limited.