ಬ್ರಹ್ಮಕುಮಾರಿ ಉಷಾ ದೀದಿ ಅವರು ಹಿಂದಿ ಭಾಷೆಯಲ್ಲಿ ಬರೆದ ಕೃತಿಯನ್ನು ಲೇಖಕ ವೀರಭದ್ರಗೌಡ ಪಾಟೀಲರು ‘ಆಧ್ಯಾತ್ಮದೆಡೆಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಒಂದು ಅನುಪಮ ವಿದ್ಯಾಲಯ, ಆಧ್ಯಾತ್ಮಿಕ ಅಸ್ತಿತ್ವ, ಆತ್ಮದ ಅಂತರಂಗ, ಪರಮಾತ್ಮನ ಸತ್ಯ ಸ್ವರೂಪದ ರಹಸ್ಯ ಉದ್ಘಾಟನೆ, ರಾಜಯೋಗದ ಆಧಾರ, ವಿಧಿ ಮತ್ತು ವಿಭಿನ್ನ ಅವಸ್ಥೆಗಳು, ಕಾಲಚಕ್ರದ ರಹಸ್ಯ, ಕರ್ಮದ ಗುಹ್ಯಗತಿ, ರಾಜಯೋಗದಿಂದ ಅಷ್ಟಶಕ್ತಿಗಳ ಪ್ರಾಪ್ತಿ ಹಾಗೂ ಜೀವನದಲ್ಲಿ ಆಧ್ಯಾತ್ಮಕತೆಯ ಅವಶ್ಯಕತೆ ಹೀಗೆ ವಿವಿಧ ಅಧ್ಯಾಯಗಳಡಿ ಶ್ರೇಷ್ಠತಮ ಮನದ ಶಕ್ತಿಯ ಸ್ವರೂಪವನ್ನು ತೋರುವುದು ಈ ಕೃತಿಯ ಉದ್ದೇಶವಾಗಿದ್ದು, ಅನುವಾದವು ಸರಳ ಹಾಗೂ ಸುಂದರವಾಗಿ ಮೂಡಿಬಂದಿದೆ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕರ್ನಾಟಕ ವ್ಯಾಪ್ತಿಯಲ್ಲಿ ಅತ್ಯಧಿಕ ಓದುಗರನ್ನು ಸೆಳೆದ ಕೃತಿ ಇದು.
‘ಕೃತಿಯಲ್ಲಿಯ ವಿಚಾರಗಳಲ್ಲಿ ಸತ್ಯದ ಸತ್ವವಿದೆ. ಪರಿವರ್ತನೆಯ ಪ್ರೇರಣೆಯಿಂದ, ಶಕ್ತಿಯ ಸಂಚಯವಿದೆ. ಅನುಭೂತಿಯ ಶಿಖರವಿದೆ. ಜೀವನ ದರ್ಶನವಿದೆ. ಮೇಲಾಗಿ ಆತ್ಮವಿಶ್ವಾಸವನ್ನು ಸಹಜವಾಗಿ ಮೂಡಿಸುತ್ತದೆ ’ ಎಂದು ಅನುವಾದಕರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡಿಗರಿಗೆ ಈ ಕೃತಿಯಲ್ಲಿ ವಿಚಾರಗಳು ಸರಳವಾಗಿ ಸಿಗಲಿ ಎಂಬ ಸದುದ್ದೇಶದೊಂದಿಗೆ ಕೃತಿಯ ಬೆಲೆಯನ್ನು ಪ್ರಕಾಶನ ಸಂಸ್ಥೆಯು ನಮೂದಿಸಿಲ್ಲ.
©2024 Book Brahma Private Limited.