ಹಿರಿಯ ಲೇಖಕ ಎಸ್.ಎಂ. ದುಲಂಗೆ ಅವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪಡಸಾವಳಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಆರ್ಥಶಾಸ್ತ್ರ) ಪದವೀಧರರು. ಆಳಂದ ತಾಲೂಕಿನ ತಡಕಲ ಗ್ರಾಮದ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ನಂತರ ಮುಖ್ಯ ಅಧ್ಯಾಪಕರಾಗಿ ಈಗ ನಿವೃತ್ತರು. ತಮ್ಮ ಹುಟ್ಟೂರಾದ ಪಡಸಾವಳಿ ಯಲ್ಲಿ(1992) ಬಸವೇಶ್ವರ ಪ್ರತಿಷ್ಠಾಪನ ಸ್ಥಾಪಿಸಿ, ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಶ್ರಯಹೀನ, ವಯೋವೃದ್ಧರು, ಕಡುಬಡವರು, ವಿಧವೆಯರು ಹೀಗೆ ಪ್ರತಿ ತಿಂಗಳು ಒಟ್ಟು 11 ಜನರಿಗೆ ತಮ್ಮ ನಿವೃತ್ತಿ ವೇತನದಿಂದ ತಲಾ 300 ರೂ.ಗಳ ನೆರವು ನೀಡುತ್ತಾ ಬಂದಿದ್ದಾರೆ. ಅವರು ಆಳಂದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.