ಮಹಾನ್ ಯೋಗಿನಿ ಗುರು ಸಕಲಮಾ ಅವರು ಆಧ್ಯಾತ್ಮಿಕ ಗುರುಗಳಾಗಿ ಪ್ರಸಿದ್ಧರು. ಇವರ ಮೂಲ ಹೆಸರು ಜ್ಯೋತಿ ಪಟ್ಟಾಭಿರಾಮ್. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿರುವ ಸಕಲಮಾ ಅವರು ಭರತನಾಟ್ಯ ಗುರುವಾಗಿ ಸಾವಿರಾರು ಮಂದಿ ಶಿಷ್ಯರಿಗೆ ನಾಟ್ಯಕಲೆಯ ಪಾಠ ಮಾಡಿದ್ದರು.
ನಂತರದಲ್ಲಿ ಆಧ್ಯಾತ್ಮಿಕತೆಯತ್ತ ತಮ್ಮ ಚಿತ್ತವನ್ನು ಹೊರಳಿಸಿ, ಹಿಮಾಲಯದ ಸ್ವಾಮಿ ರಾಮ ಮತ್ತು ಮೈಸೂರಿನ ಡಾ. ರಾ ಸತ್ಯನಾರಾಯಣ ಅವರ ನೇರ ಶಿಷ್ಯರಾದರು. ಪ್ರಸ್ತುತ ಸಕಲಮಾ ಅವರು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಮಂತ್ರ ದೀಕ್ಷೆಗಳು, ಹಿಮ್ಮೆಟ್ಟುವಿಕೆಗಳು, ಕಾರ್ಯಾಗಾರಗಳು ಮತ್ತು ವೈಯಕ್ತಿಕ ಮಾರ್ಗದರ್ಶನದ ಅವಧಿಗಳ ಮೂಲಕ ಪ್ರಪಂಚದಾದ್ಯಂತ ಅನ್ವೇಷಕರು ಮತ್ತು ಅವರ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.