’ಮ್ಯೂಸಿಕ್ ರೂಮ’ ಧೋಂಡೂಬಾಯಿ ಕುಲಕರ್ಣಿ ಎಂಬ ಸರಳ, ಮುಗ್ಧ, ಧಾರ್ಮಿಕ ಸ್ವಭಾವದ ಹಿರಿಯ ಸಂಗೀತಗಾರ್ತಿಯ ಜೀವನ ಕಥೆ. ಇದರ ಕನ್ನಡ ಅನುವಾದವೇ ’ಸಂಗೀತ ಕೋಣೆ’ . ದೋಂಡೂಬಾಯಿ ಕುಲಕರ್ಣಿ ವಯಸ್ಸಿನಲ್ಲಿಯೂ, ವಿದ್ವತ್ತಿನಲ್ಲೂ ಹಿರಿಯ ಸಂಗೀತ ಚೇತನ. ಮೂಲ ಕೃತಿಯನ್ನು ಬರೆದವರು ಧೋಂಡೂಬಾಯಿ ಶಿಷ್ಯೆ ನಮಿತಾ ದೇವಿಯಾಲ. ಗುರುಗಳ ಕಷ್ಟಮಯ, ಆದರ್ಶಮಯ ಜೀವನದ ಒಳನೋಟವನ್ನು ಕೃತಿಯಲ್ಲಿ ಸೆರೆಹಿಡಿದಿದ್ದಾರೆ. ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬಾರದಂತೆ ಕನ್ನಡಕ್ಕೆ ಅನುವಾದಿಸುವಲ್ಲಿ ಸದಾನಂದ ಕನವಳ್ಳಿಯವರು ಯಶಸ್ವಿಯಾಗಿದ್ದಾರೆ. ಸಂಗೀತಲೋಕವನ್ನೇ ಗರ್ಭೀಕರಿಸಿಕೊಂಡ ಈ ಪುಸ್ತಕವನ್ನು ಸಂಗೀತ ಪ್ರೇಮಿಗಳಂತೂ ಓದಲೇಬೇಕು.
©2024 Book Brahma Private Limited.