ಸದ್ಗುರು ಶ್ರೀಧರ ಚರಿತಮ್

Author : ಜಿ.ಎ.ನರಸಿಂಹಮೂರ್ತಿ

₹ 250.00




Year of Publication: 1996
Published by: ಜಾನಕಿ ಜನಾರ್ಧನ ರಾಮದಾಸಿ
Address: ಹೊನ್ನಾವರ

Synopsys

ಶ್ರೀಧರ ಸ್ವಾಮಿಗಳವರು ಮಲೆನಾಡಿನ ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆ ಗಳಲ್ಲಿ ತಪಃಸಾಧನೆ ಮಾಡಿದ ಸ್ಥಾನಗಳು ಕ್ಷೇತ್ರಗಳಾಗಿ ಭಕ್ತರನ್ನು ಆಕರ್ಷಿಸಿವೆ. ಸಾಗರದ ಸಮೀಪದ ಕಗ್ಗಾಡು ವದ್ದಳ್ಳಿಯ ಶ್ರೀಧರತೀರ್ಥ ಇಂದು ಭಕ್ತರ ವರದಪುರ ವೆನಿಸಿ ಕಂಗೊಳಿಸಿದೆ. ಇದೇ ಕ್ಷೇತ್ರದಲ್ಲಿ ಅವರ ಯೋಗಸಮಾಧಿಯಾಗಿರುವು ದೊಂದು ವಿಶೇಷ. ಶ್ರೀಧರ ಸ್ವಾಮಿಗಳವರ ದೃಷ್ಟಿ ವಿಶ್ವ ವಿಶಾಲವಾಗಿತ್ತು. ಅವರು ಬಹುಶ್ರುತರೂ ಆಗಿದ್ದರು. ಸಂಸ್ಕೃತ, ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ಪರಿಣತರಾಗಿದ್ದರು. ಆ ಭಾಷೆಗಳಲ್ಲಿ ಪ್ರವಚನಗಳನ್ನು ನೀಡಿ ಜನರಲ್ಲಿ ಅಧ್ಯಾತ್ಮದತ್ತ ಆಸಕ್ತಿ ಮೂಡಿಸಿದುದಲ್ಲದೆ, ಸ್ತೋತ್ರಗಳನ್ನೂ ರಚಿಸಿ, ಭಾವಪರವಶ ರಾಗಿ ಹಾಡಿ ಭಕ್ತರ ಹೃದಯದಲ್ಲಿ ಭಕ್ತಿಯ ಗಂಗೋತ್ರಿಯನ್ನು ಹರಿಸಿ ಅವರ ಜೀವನ ಪಾವನಗೊಳಿಸಿದ ಮಹನೀಯರು ಎಂದು ಡಿ.ವೀರೇಂದ್ರ ಹೆಗ್ಗಡೆಯವರು ಮುನ್ನಡಿಯಲ್ಲಿ ಬರೆದ ಒಂದು ಭಾಗ. 

About the Author

ಜಿ.ಎ.ನರಸಿಂಹಮೂರ್ತಿ

ಶ್ರೀ ಶ್ರೀಧರರ ಭಕ್ತರಾಗಿದ್ದ ಅವರು ಆ ಕಾಲದಲ್ಲಿ ಕನ್ನಡ ಓದುಗರಿಗೆ ತಮ್ಮ ಗುರುಗಳ ಬಗ್ಗೆ ಪರಿಚಯಾತ್ಮಕ ಲೇಖನಗಳನ್ನು ಬರೆದಿದ್ದರು. ಆಧ್ಯಾತ್ಮ ವಿಷಯಗಳ ಬಗ್ಗೆ ‘ಸದ್ಬೋಧ ಚಂದ್ರಿಕೆ’, ‘ಶಂಕರ ಭಾಸ್ಕರ’ ನಿಯತಕಾಲಿಗಳಲ್ಲಿ ಗಂಭೀರ ಲೇಖನಗಳನ್ನು ಮಂಡನೆ ಮಾಡಿದ್ದರು. ಅಷ್ಟೇ ಉತ್ಸುಕತೆಯಿಂದ ‘ವಿನೋದ’ ಮಾಸಪತ್ರಿಕೆಗೆ ಹಾಸ್ಯ ಲೇಖನಗಳನ್ನೂ ಬರೆದಿದ್ದರು. ಶಿಶು ಸಾಹಿತ್ಯದ ಬಗ್ಗೆ ಅಪಾರ ಪ್ರೇಮವಿದ್ದ ಅವರು ‘ಸಚಿತ್ರ ರಾಮಾಯಣ’, ‘ಬಾಲ ಮಹಾಭಾರತ’, ‘ಮಕ್ಕಳ ಕತೆಗಳು’ ಪುಸ್ತಕಗಳನ್ನು ರಚಿಸಿ ಸ್ವತಃ ಪ್ರಕಟಿಸಿದ್ದರು. ಅವರ ಇನ್ನಿತರ ಪ್ರಕಟಿತ ಕೃತಿಗಳೆಂದರೆ ‘ಶ್ರೀ ಶ್ರೀಧರ ಚರಿತ್ರೆ’, ‘ದತ್ತಾತ್ರೇಯ’ ಮತ್ತು ‘ಅಸೇತು ಹಿಮಾಚಲ ಯಾತ್ರೆ (ಪ್ರವಾಸ ...

READ MORE

Related Books