ರಂಗದಲ್ಲಿ ಅಂತರಂಗ

Author : ಕೆ.ವಿ. ಸುಬ್ಬಣ್ಣ

Pages 344

₹ 240.00




Year of Publication: 2014
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಹೆಸರಾಂತ ನಟ, ನಿರ್ದೇಶಕ ಸ್ತಾನಿಸ್ಲಾವ್‌ಸ್ಕಿಯ ಅಭಿನಯ ಶಾಸ್ತ್ರ ಕುರಿತಾದ ಪುಸ್ತಕ.  ಜಗತ್ತಿನಲ್ಲಿಯೇ ಮೊದಲ ಬಾರಿಗೆ ಅಭಿನಯ ಎಂಬ ಅಮೂರ್ತ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ವಿವೇಚಿಸಿದವ ಸ್ತಾನಿಸ್ಲಾವ್‌ಸ್ಕಿ. ‘ಅಭಿನಯ ಶಾಸ್ತ್ರ’ದ ಬಗ್ಗೆ ಗಮನ ಸೆಳೆದ ಸ್ತಾನಿಸ್ಲಾವ್‌ಸ್ಕಿಯ ಈ ಪುಸ್ತಕವನ್ನು ಜಗತ್ತಿನ ಎಲ್ಲ ಭಾಗಗಳ ಅಭಿನಯಕಾರರು ಮತ್ತು ರಂಗಕರ್ಮಿಗಳು ಶಾಸ್ತ್ರಗ್ರಂಥ ಎಂದು ಪರಿಗಣಿಸಿದ್ದಾರೆ. ಜಗತ್ತಿನ ಬಹುತೇಕ ರಂಗಶಿಕ್ಷಣಶಾಲೆಗಳು  ಪುಸ್ತಕದಲ್ಲಿರುವ ‘ಪದ್ಧತಿ’ಯನ್ನೇ ಅಭಿನಯ ಶಿಕ್ಷಣದ ಅಡಿಗಲ್ಲಾಗಿ ಇಟ್ಟುಕೊಂಡಿವೆ. ರಂಗಕಲೆಯಲ್ಲಿ ಆಸಕ್ತಿ ಇರುವವರೆಲ್ಲರೂ ಓದಬೇಕಾದ ಪ್ರಮುಖ ಪುಸ್ತಕ. ಕೆ.ವಿ. ಸುಬ್ಬಣ್ಣ ಅವರು ಸೊಗಸಾಗಿ ಕನ್ನಡೀಕರಿಸಿದ್ದಾರೆ.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Related Books