ಕವಿ, ಅನುವಾದಕ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ರಂಗಭೂಮಿ-ನಾಟಕ ಕುರಿತ ಬರೆಹಗಳ ಸಂಕಲನ ’ರಂಗಾಯಣ’. ಈ ಸಂಗ್ರಹದಲ್ಲಿ 21 ಲೇಖನಗಳು ಹಾಗೂ ನಾಲ್ಕು ನಾಟಕಗಳಿಗೆ ಬರೆದ ಮುನ್ನುಡಿಗಳಿವೆ.
ರಾಷ್ಟ್ರೀಯ ರಂಗಭೂಮಿಗೆ ಕನ್ನಡದ ಕೊಡುಗೆ, ನಾಡಿನ ರಂಗಸಂಪದ, ಉತ್ತರ ಕರ್ನಾಟಕದ ರಂಗಭೂಮಿ : ಅಂದು-ಇಂದು, ಧಾರವಾಡ ಜಿಲ್ಲೆಯ ರಂಗಭೂಮಿ, ವಿಶ್ವರೂಪಿ ನಾಟಕ, ನಮ್ಮ ಹವ್ಯಾಸೀ ರಂಗಭೂಮಿ, ಪ್ರೇಕ್ಷಕನ ದೃಷ್ಟಿಯಲ್ಲಿ ಹವ್ಯಾಸೀ ರಂಗಭೂಮಿ, ಒಂದು ಆಶೆ: ಆಶಯ, ನಿರ್ದೇಶನ ಹಾಗೂ ಪ್ರಯೋಗ-ಪಲಾಯನ, ಹವ್ಯಾಸೀ ನಾಟಕ ತಂಡಗಳ ಆರ್ಥಿಕ ವ್ಯವಸ್ಥೆ, ಹವ್ಯಾಸೀ ರಂಗಭೂಮಿ : ಕೆಲವು ಪ್ರಶ್ನೆ-ಉತ್ತರಗಳು, ವೃತ್ತಿ ರಂಗಭೂಮಿ : ಅಂದು-ಇಂದು, ನಾಟಕ ಮತ್ತು ಪ್ರದರ್ಶಕ ಕಲೆಗಳು, ಕನ್ನಡ ನಾಟಕಗಳಲ್ಲಿ ಪೌರಾಣಿಕ ವಸ್ತು ವಿನ್ಯಾಸ : ತಂತ್ರ ಮತ್ತು ಪ್ರಯೋಗ, ನಾಟಕ : ಅನುವಾದ ಸಮಸ್ಯೆ, ಈ ದಶಕದ ನಾಟಕ, ಕನ್ನಡ ನಾಟಕಗಳು : ಅನುವಾದ ಮತ್ತು ರೂಪಾಂತರ, ರೇಡಿಯೋ ನಾಟಕಗಳು, ಬಸವಪ್ಪಶಾಸ್ತ್ರಿಗಳು, ವಿ.ಕೃ. ಗೋಕಾಕರ ನಾಟಕಗಳು, ರಾಕೇಶ್, ತೆಂಡುಲ್ಕರ್, ಸರ್ಕಾರ್, ಶ್ರೀರಂಗ ಎಂಬ ಲೇಖನಗಳಿವೆ.
ಹಾಗೆಯೇ ಪಾಂಡುರಂಗ ಪಾಟೀಲ ’ಜ್ವಾಲೆ ಮತ್ತು ಮಧ್ಯಂತರ’, ಹೂಲಿ ಶೇಖರ ಅವರ ’ಹಾವು ಹರಿದಾಡತಾವ’, ಸತ್ಯಾನಂದ ಪಾತ್ರೋಟರ ’ಮತ್ತೊಬ್ಬ ಏಕಲವ್ಯ’ ವಿರೂಪಾಕ್ಷ ಬಡಿಗೇರ ಅವರ ಯಶೋಧರ ನಾಟಕಗಳಿಗೆ ಬರೆದ ಮುನ್ನುಡಿಗಳು ಈ ಸಂಗ್ರಹದಲ್ಲಿವೆ. ಪಟ್ಟಣಶೆಟ್ಟರ ರಂಗಚಿಂತನೆ ಹಾಗೂ ಕನ್ನಡ ರಂಗಭೂಮಿಯ ಕುರಿತು ತಿಳಿಯುವವರಿಗೆ ಇದೊಂದು ಅಮೂಲ್ಯ ಗ್ರಂಥ ಎನ್ನಬಹುದು.
©2024 Book Brahma Private Limited.