ರಂಗ ಅನ್ವೇಷಣೆ : ಪೀಟರ್ ಬ್ರೂಕ್‍ನ ಪ್ರಯೋಗಗಳು

Author : ಕೆ.ವಿ. ಅಕ್ಷರ

Pages 40

₹ 90.00




Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು ಕರ್ನಾಟಕ - 577417
Phone: 9480280401

Synopsys

‘ರಂಗ ಅನ್ವೇಷಣೆ ಪೀಟರ್ ಬ್ರೂಕ್‍ನ ಪ್ರಯೋಗಗಳು’ ಕೃತಿಯು ಕೆ.ವಿ ಅಕ್ಷರ ಅವರ ಬ್ರೂಕ್‍ನ ರಂಗಸಂಶೋಧನೆಯನ್ನು ಪರಿಚಯಿಸುವಂಹ ಕೃತಿಯಾಗಿದೆ. ಪಾಶ್ಚಾತ್ಯ ರಂಗಭೂಮಿಯ ಹೊಸ ಪ್ರಯೋಗಗಳೆಲ್ಲವೂ ಒಂದು ಘಟ್ಟ ತಲುಪಿ ಸ್ಥಗಿತಗೊಳ್ಳುತ್ತಿದ್ದ ಸಂದರ್ಭದಲ್ಲಿ, ರಂಗಭೂಮಿಯ ಉದ್ದೇಶ ಹಾಗೂ ಕ್ರಿಯಾಮಾರ್ಗಗಳನ್ನು ಮೂಲಭೂತವಾಗಿ ಹೊಸದಾಗಿ ಶೋಧಿಸಿಕೊಳ್ಳಲು ಪ್ರಯತ್ನಿಸಿದ ಹಾಗೂ ಆ ಮೂಲಕ ವಿಶ್ವದ ರಂಗಪ್ರಿಯರ ಆಸಕ್ತಿಯನ್ನು ಸೆಳೆದ ಪೀಟರ್ ಬ್ರೂಕ್‍ನ ರಂಗಶೋಧನೆಯನ್ನು ಸ್ಥೂಲವಾಗಿ ಪರಿಚಯಿಸಿಕೊಡುವ ಕಿರುಪುಸ್ತಕ ಇದಾಗಿದೆ. ಪೀಟರ್ ಬ್ರೂಕ್‍ನ ಪ್ರಯೋಗಗಳನ್ನು ಕೆಂದ್ರವಾಗಿಟ್ಟುಕೊಂಡು ಅದರ ಹಿನ್ನೆಲೆಯ ವ್ಯಾಪ್ತಿಯನ್ನು ವಿವರಿಸುವ ಬರಹ ಈ ಕೃತಿಯಲ್ಲಿದೆ. ಪ್ರಸ್ತುತ ಭಾರತದ ರಂಗಭೂಮಿಗು ಗಮನವನ್ನು ಈ ಕೃತಿಯು ಕೊಟ್ಟಿರುತ್ತದೆ.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books