ಆರ್. ನಾಗೇಶ್ ರಂಗವಿಹಂಗಮ

Author : ಬಿ.ಎಸ್. ವಿದ್ಯಾರಣ್ಯ

Pages 193

₹ 300.00




Year of Publication: 2021
Published by: ಚಾರುಮತಿ ಪ್ರಕಾಶನ
Address: # 224, 4ನೇ ಮುಖ್ಯರಸ್ತೆ, ಕಮಲಾನಗರ, ಚಾಮರಾಜಪೇಟೆ, ಬೆಂಗಳೂರು-560018
Phone: 094482 35553

Synopsys

ಲೇಖಕ ಬಿ.ಎಸ್, ವಿದ್ಯಾರಣ್ಯ ಅವರು ಸಂಪಾದಿಸಿದ ಲೇಖನಗಳ ಕೃತಿ-ಆರ್.ನಾಗೇಶ ರಂಗವಿಹಂಗಮ. ರಂಗಭೂಮಿಯ ವಿನ್ಯಾಸ, ನಟ, ಬೆಳಕು ತಜ್ಞ ಹೀಗೆ ಹತ್ತು ಹಲವು ಆಯಾಮಗಳಲ್ಲಿ ಕೆಲಸ ಮಾಡಿರುವ ಆರ್. ನಾಗೇಶ ಅವರ ವ್ಯಕ್ತಿತ್ವ ಪರಿಚಯಿಸುವ ಕೃತಿ ಇದು. 20ನೇ ಶತಮಾನದ ಆರಂಭದಲ್ಲಿ ಯಾವ ರಂಗ ತರಬೇತಿಯೂ ಇಲ್ಲದೇ ರಂಗಭೂಮಿ ವಲಯದಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಆರ್. ನಾಗೇಶ್ (ಇವರ ಮೂಲ ಹೆಸರು-ರಾಮರಾಜೇ ಅರಸು ನಾಗೇಶ) ಅವರು ಹಲವಾರು ನಟರನ್ನು ಕನ್ನಡದ ರಂಗಭೂಮಿಗೆ ನೀಡಿದ ಕೀರ್ತಿ ಇವರದ್ದು. ಶ್ರೀನಿವಾಸ ಜಿ. ಕಪ್ಪಣ್ಣ, ಟಿ.ಎನ್. ಸೀತಾರಾಮು, ಕೆ.ಮರಳುಸಿದ್ದಪ್ಪ, ಪುರುಷೋತ್ತಮ ಬಿಳಿಮಲೆ, ಉಮಾಶ್ರೀ, ಮಂಡ್ಯ ರಮೇಶ್, ಎನ್.ಕೆ. ಮೋಹನರಾಮ ಅವರೆಲ್ಲರೂ ಆರ್. ನಾಗೇಶರನ್ನು ಬಲ್ಲವರು. ಈ ಎಲ್ಲ ಲೇಖಕರಿಂದ ಬರಹಗಳನ್ನು ಸಂಪಾದಿಸಿದ ಕೃತಿ ಇದು. ಈ ಕೃತಿಯು ಆರ್. ನಾಗೇಶ ಅವರ ರಂಗ ಹೆಜ್ಜೆಗಳನ್ನು ದಾಖಲಿಸುತ್ತವೆ.

About the Author

ಬಿ.ಎಸ್. ವಿದ್ಯಾರಣ್ಯ

ಲೇಖಕ ಬಿ.ಎಸ್. ವಿದ್ಯಾರಣ್ಯ ಅವರು ಪತ್ರಕರ್ತರು. ರಂಗಭೂಮಿ ನಟರು. ಪ್ರಕಾಶಕರು. ನಿನಾಸಂ ಪದವೀಧರರು.  ಅನೇಕ ವೈಚಾರಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರು. ಕೃತಿಗಳು: ,(ಸಂಪಾದನೆ)  ರಂಗಸಂಗತ, ಆರ್. ನಾಗೇಶ ರಂಗವಿಹಂಗಮ, ಪಶ್ಚಿಮದ ಪಯಣಿಗರು. ಚಿನ್ನದ ಪುಟಗಳು, ಕೃಷ್ಣಮೂರ್ತಿ ಕವತ್ತಾರ್, ಪ್ರೊ. ಬಿ.ಸಿ. (ಅನುವಾದಗಳು) ಗಲಿವರಾಯಣ, ರಾಬಿನ್ ಸನ್ ಕ್ರುಸೋ, 80 ದಿನಗಳಲ್ಲಿ ಭೂ ಪ್ರದಕ್ಷಿಣೆ. (ಲೇಖನ ಕೃತಿ) ದೇವರು ಮತ್ತು ಡೈನೋಸಾರಸ್.   ...

READ MORE

Related Books