ಪದಮಾಲೆ

Author : ಪ್ರಕಾಶ್ ರಾಜಗೋಳಿ ಬೆಳಗಾವಿ

Pages 120

₹ 130.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಪದಮಾಲೆ’ ಪ್ರಕಾಶ್ ರಾಜಗೋಳಿ ಅವರ ಕೃತಿಯಾಗಿದೆ. ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ, ಕ್ರೀಡೆ ಹೀಗೆ ಹತ್ತು ಹಲವಾರು ಕ್ಷೇತ್ರದ ವಿಷಯಗಳ ಬಗ್ಗೆ ಮತ್ತು ಈ ಕ್ಷೇತ್ರಗಳ ಸಾಧಕರ ವಿವರಗಳನ್ನು ಸುಳಿವುಗಳಲ್ಲಿ ಅಳವಡಿಸಲಾಗಿದೆ. ಈ ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು. ಸಾಮಾನ್ಯ ಬಳಕೆಯ ಪದಗಳ ಜೊತೆಗೆ ಅಷ್ಟೇನೂ ಬಳಕೆಯಲ್ಲಿಲ್ಲದ ಗ್ರಾಂಥಿಕ ಪದಗಳು ಮತ್ತು ಕೆಲ ಪ್ರಾಂತೀಯ ಪದಗಳೂ ಸೇರಿಕೊಂಡಿವೆ. ಕನ್ನಡದ ಸಾಮಾನ್ಯ ಜನರಿಗೆ, ಕನ್ನಡ ಭಾಷೆ ಕಲಿಯಲಿಚ್ಛಿಸುವವರಿಗೆ, ವಿಶೇಷವಾಗಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಪುಸ್ತಕ ರಚಿಸಲಾಗಿದೆ. ಅವರಲ್ಲಿ ಕನ್ನಡದ ಬಗ್ಗೆ ಆಸಕ್ತಿ ಹುಟ್ಟಿಸಿ, ಚಿಂತನೆಗೆ ತೊಡಗಿಸಿ ತನ್ಮೂಲಕ ಪದಗಳ ಬಳಕೆ ಹೆಚ್ಚಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಸದುದ್ದೇಶ ಈ ಪುಸ್ತಕದ್ದು.

About the Author

ಪ್ರಕಾಶ್ ರಾಜಗೋಳಿ ಬೆಳಗಾವಿ

ಪ್ರಕಾಶ್ ರಾಜಗೋಳಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದವರು. ಸವದತ್ತಿಯಲ್ಲಿ 1971ಯಲ್ಲಿ ಜನನ. ಹೈಸ್ಕೂಲು, ಕಾಲೇಜು ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಪಡೆದು, ಬಿವಿಬಿ ಇಂಜಿನೀರಿಂಗ್ ಕಾಲೇಜಿನಿಂದ (ಈಗ ಕೆಎಲ್‌ಈ ಟೆಕ್ನಿಕಲ್ ಯೂನಿವರ್ಸಿಟಿ) ನಿಂದ 1993ರಲ್ಲಿ ಇನ್ಸ್‌ಟ್ರುಮೆಂಟೇಷನ್ ಇಂಜಿನೀಯರಿಂಗ್‌ನಲ್ಲಿ ಪದವಿ ಗಳಿಸಿದ್ದಾರೆ. ಒಟ್ಟು 30 ವರ್ಷಗಳ ಕಾರ್ಯಾನುಭವ ಹೊಂದಿರುವ ಪ್ರಕಾಶ್ ರಾಜಗೋಳಿಯವರು ಎಸ್.ಎ.ಪಿ ಕ್ಷೇತ್ರದಲ್ಲಿ 22ಕ್ಕೂ ಹೆಚ್ಚು ವರ್ಷಗಳ ಕಾರ್ಯಾನುಭವ ಪಡೆದಿದ್ದಾರೆ. ಕನ್ನಡದಲ್ಲಿ ಲೇಖನ ಬರೆಯುವುದು, ಆಕಾಶವಾಣಿಗೆ ಕಾರ್ಯಕ್ರಮ ನೀಡುವುದು, ಸಾಮಾಜಿಕ ಸಂಘಟನೆಗಳೊಂದಿಗೆ ಕೈಜೋಡಿಸುವುದು, palindrome ನಂಬರಿನ ಭಾರತದ ರೂಪಾಯಿ ನೋಟುಗಳ ಸಂಗ್ರಹ ಇವರ ಆಸಕ್ತಿ. ಈಗಾಗಲೇ ...

READ MORE

Related Books