ʼಓರ್ವ ಭಿಕ್ಷುಕ ಚಕ್ರವರ್ತಿಯ ಕಥೆʼ ಕೃತಿಯು ಡಾ.ಬಸ್ತಿ ವಾಮಣ ಶೆಣೈ ಅವರ ಆತ್ಮಕಥನ. ಈ ಪುಸ್ತಕವನ್ನು ಕೊಂಕಣಿ ಭಾಷೆಯಿಂದ ಲೇಖಕಿ ಡಾ.ಗೀತಾ ಶೆಣೈ ಕನ್ನಡಕ್ಕೆ ಅನುವಾದಿಸಿದ್ದಾರೆ. ಗೋವೆಯಿಂದ ನಿರಾಶ್ರಿತರಾಗಿ ಹೊರಬಂದು ನಾಡಿನ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ನೆಲೆನಿಂತ ಕೊಂಕಣಿ ಭಾಷಾ ಸಮುದಾಯದವರು ಮಾಡಿದ ಅದ್ಭುತ ಸಾಧನೆಗಳ ಪಕ್ಷಿನೋಟವನ್ನು ನಮ್ಮ ಮುಂದೆ ಇರಿಸುವ ಅದ್ಭುತ ಕಥಾನಕವು ಇದಾಗಿದೆ. ಸಂಸ್ಕೃತ ಮತ್ತು ಸಮಾಜಸೇವೆಯ ಮಹತ್ತರವಾದ ಧ್ಯೇಯೋದ್ದೇಶಗಳಿಗೆ ಒಬ್ಬ ವ್ಯಕ್ತಿ ಕಟುಬದ್ದನಾಗಿ ನಿಂತರೆ ಅತನನ್ನು ಯಾರಿಂದಲೂ ಕೆಳದೂಡಲು ಸಾಧ್ಯವಿಲ್ಲ ಎಂಬುದನ್ನು ವಾಮಣ ಶೆಣೈ ತಮ್ಮ ಆತ್ಮಕಥನದಲ್ಲಿ ಚಿತ್ರಿಸಿದ್ದಾರೆ. ವಾಮಣ ಶೆಣೈ ಅವರ ಸಾಹಿತ್ಯಿಕ ಪ್ರತಿಭೆ ಮತ್ತು ನಿರೂಪಣಾ ಕೌಶಲ್ಯಗಳಿಂದ ಇದೊಂದು ಸ್ವಾರಸ್ಯಕರ ಕಥಾನಕವಾಗಿಯೂ ನಮ್ಮ ಮನಸನ್ನು ಸೂರೆಗೊಳ್ಳುತ್ತದೆ.
©2024 Book Brahma Private Limited.