`ನೀತಿಶತಕಮ್’ ಶಿಬಿರ ವರ್ಗ, ಅಭಿಯಾನಗಳಿಗೆ ಅನುಕೂಲವಾಗುವಂತೆ ಧ್ವನಿಮುದ್ರಿಕೆಗೆ ಅನುಗುಣವಾಗಿ ಪದಚ್ಛೇದ-ಭಾವಾರ್ಥಸಹಿತವಾಗಿ ನಿರ್ಮಿಸಿದ ಲಘುಪುಸ್ತಕವಾಗಿದೆ. ಈ ಕೃತಿಯು ಸಂಸ್ಕೃತಸಾಹಿತ್ಯದಲ್ಲಿ ಹತ್ತಾರು ಸುಭಾಷಿತ ಸಂಗ್ರಹಗಳಿದ್ದರೂ ಭಗವಾನ್ ಭರ್ತೃಹರಿಕೃತ 'ನೀತಿಶತಕಮ್' ಸ್ವತಂತ್ರ ಸುಭಾಷಿತ ಗ್ರಂಥವಾಗಿದೆ. ಮಹಾಮಹಿಮ ಪತಂಜಲಿಯ ಅನಂತರ ಆ ಸ್ಥಾನವನ್ನು ಸ್ವಲ್ಪವಾದರೂ ಅಲಂಕರಿಸಿದವನು ಭರ್ತೃಹರಿ ಮಾತ್ರ ಎಂದು ಹೇಳಬಹುದು. ನೀತಿಶತಕದಲ್ಲಿ ಅನೇಕ ಛಂದಸ್ಸುಗಳನ್ನು ಬಳಸಿದ್ದಾನೆ. ಸೌಂದರ್ಯ, ವೈರಾಗ್ಯಶತಕಗಳು ಹಾಗೂ ವಾಕ್ಯಪದೀಯ ಎಂಬ ವ್ಯಾಕರಣಗ್ರಂಥವನ್ನು ರಚಿಸಿದ್ದಾನೆ. ೨ ನೇ ವಿಕ್ರಮಾದಿತ್ಯರಾಜನ ಸಹೋದರನಾದ ಇವನಿಗೆ ಕವಿಯಾಗುವ ಯೋಗವಿತ್ತು. ವಿದ್ವಾನ್ ಸರ್ವತ್ರ ಪೂಜ್ಯತೇ ಎಂಬುದನ್ನು ಸಾರ್ಥಕ ಮಾಡಿದ ಭರ್ತೃಹರಿ ವಿಶ್ವಮಾನ್ಯನಾಗಿದ್ದಾನೆ. ಅಂದಾಜು 2 ನೇ ಶತಮಾನದಲ್ಲಿ ಭರ್ತೃಹರಿ ಜೀವಿಸಿರಬಹುದೆಂದು ಅನೇಕರ ಅಭಿಪ್ರಾಯ. ಎಲ್ಲವನ್ನೂ ಹೊಂದುವ ಅರ್ಹತೆಯಿದ್ದರೂ ವೈರಾಗ್ಯದಿಂದ ಇವನು ಅಧ್ಯಾತ್ಮಮಾರ್ಗ ಹಿಡಿದನಲ್ಲದೇ ಭಾರತೀಯ ವಾಹ್ಮಯವನ್ನು ಶ್ರೀಮಂತಗೊಳಿಸಿದ್ದಾನೆ. ನೀತಿಶತಕದ ಕೆಲವು ಸುಭಾಷಿತಗಳು ಸರಳವಾಗಿದ್ದು ಮತ್ತೆ ಕೆಲವು ಅಧ್ಯಾಹಾರ, ಅನುಷಂಗ, ದೂರಾನ್ವಯದಿಂದ ಕೂಡಿವೆ. ಉದಾ. 'ಬೋದ್ದಾರೋ ...' ಎಂಬ ಸುಭಾಷಿತ ಶ್ಲೋಕವನ್ನು ಸರಿಯಾಗಿ ಅನ್ವಯ ಮಾಡುವಾಗ ವಿವಿಧ ಶಬ್ದಗಳನ್ನು ಅಧ್ಯಾಹರ ಮಾಡಿಕೊಳ್ಳಬೇಕಾಗುತ್ತದೆ. ಈ ಪುಸ್ತಕದಲ್ಲಿ ಶ್ಲೋಕಗಳ ಅಕಾರಾದಿ ಸೂಚಿ ಹಾಗೂ ಪ್ರತಿ ಶ್ಲೋಕಕ್ಕೆ ಶೀರ್ಷಿಕೆ ನೀಡಲಾಗಿದೆ. ಕೊನೆಯಲ್ಲಿ ಸ್ತೋತ್ರಪುಸ್ತಕ ನಿರ್ಮಾಣವಿಧಾನವನ್ನು ತಿಳಿಸಲಾಗಿದೆ. ಡಾ. ಕೆ.ಗಣಪತಿ ಭಟ್ಟರು ಅನೇಕ ಪುಸ್ತಕಗಳನ್ನು ಪಾಠಭೇದವನ್ನು ಗಮಿನಿಸಿ ಈ ನಿರ್ಣಯಕ್ಕೆ ಬಂದಿದ್ದಾರೆ.
©2024 Book Brahma Private Limited.