ಮಹಾತ್ಮ ಗಾಂಧೀಜಿ ಅವರ ‘ಇಂಡಿಯಾ ಆಫ್ ಮೈ ಡ್ರೀಮ್ಸ್ ’ ಎಂಬ ಆಂಗ್ಲ ಕೃತಿಯನ್ನು ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ನನ್ನ ಕನಸಿನ ಭಾರತ. ಭಾರತವು ಜಾತಿ-ಧರ್ಮಗಳ ವೈವಿಧ್ಯಮಯ ದೇಶ. ಇದರಿಂದ, ಅದರ ವಿಕಾಸಕ್ಕೆ ಅಡ್ಡಿಯಾಗುತ್ತಿರುವುದು ಒಂದೆಡೆಯಾದರೆ ಜಾತ್ಯತೀತ ಎಂಬ ಪರಿಕಲ್ಪನೆಯನ್ನು ವಿಶ್ವಕ್ಕೆ ನೀಡುವುದು ಮತ್ತೊಂದೆಡೆ. ಗಾಂಧೀಜಿ ಅವರ ಕಲ್ಪನೆಯಲ್ಲಿ ಭಾರತವು ಸರ್ವ ಧರ್ಮಗಳ ಸಮನ್ವಯತೆಯನ್ನು ಕಾಪಾಡಿಕೊಳ್ಳುವುದೇ ಆಗಿದೆ. ದೇವರು ಒಬ್ಬನೇ. ರಾಮ, ರಹೀಂ, ಅಲ್ಲಾ ಎಲ್ಲರೂ ಒಂದೇ. ಇಂತಹ ಸಂದೇಶ ನೀಡುವುದು ಗಾಂಧೀಜಿ ಅವರ ಉದ್ದೇಶವಾಗಿತ್ತು. ಅದಕ್ಕೆಂದೇ ಅವರು ಅತ್ಯಂತ ಕೆಳಮಟ್ಟದಲ್ಲಿದ್ದ ಜನರನ್ನು ‘ಹರಿಜನರು’ ಎಂದು ಹೆಸರಿಸಿ, ಅವರೂ ಸಹ ದೇವರು ಮಕ್ಕಳು ಎಂಬ ಭಾವನೆ ಬರುವಂತೆ, ಆ ಮೂಲಕ ಸಮಾನತೆ ಬರುವಂತೆ ನೋಡಿಕೊಂಡಿದ್ದರು. ಇದು ತಮ್ಮ ಬದುಕಿನ ಕನಸೂ ಆಗಿತ್ತು. ಅದನ್ನು ಈ ದೇಶದ ಅಭಿವೃದ್ಧಿಯಲ್ಲಿ ಕಾಣಬಯಸಿದ್ದರು. ಇಂತಹ ಸಂಗತಿಗಳನ್ನು ಒಳಗೊಂಡ ಅವರ ಆತ್ಮಕಥೆಯಂತಿರುವ ಈ ಕೃತಿಯು ಕನ್ನಡಕ್ಕೆ ಸಮರ್ಪಣೆಯಾಗಿದೆ.
©2024 Book Brahma Private Limited.