ನನ್ನ ಜೀವನ, ಡಾ. ಅಂಬೇಡ್ಕರ್

Author : ಬಂಧು ಸಿದ್ದೇಶ್ವರಕರ್ ಕೆ.ಎಸ್.

Pages 102

₹ 81.00




Year of Publication: 2014
Published by: ಸಿದ್ಧಾರ್ಥ ಪ್ರಕಾಶನ
Address: # 4/1, ಎಂ.ಎಸ್.ಕೆ.ಮಿಲ್ ರಸ್ತೆ, ನ್ಯೂ ಘಾಟಗೆ ಲೇಔಟ್, ಕಲಬುರಗಿ-585103.
Phone: 9449992776

Synopsys

‘ನನ್ನ ಜೀವನ’ ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಬರೆದ ಆತ್ಮಕಥೆಯನ್ನು ಲೇಖಕ ಕೆ.ಎಸ್.ಬಂಧು ಸಿದ್ದೇಶ್ವರಕರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ದೇಶದಲ್ಲಿ ಒಬ್ಬ ದಲಿತ ತನ್ನ ಸ್ವಾಭಿಮಾನದೊಂದಿಗೆ ಎಲ್ಲ ಅವಮಾನ-ಹಿಂಸೆಗಳನ್ನು ಸಹಿಸಿ ಹೇಗೆ ಸಾಧನೆಯ ಶಿಖರವನ್ನು ತಲುಪುತ್ತಾನೆ ಎಂಬುದರ ಒಳನೋಟ ನೀಡುವ ಕೃತಿ ಇದು. ಡಾ.ಅಂಬೇಡ್ಕರ್ ಅವರು ತಮ್ಮ ಕಷ್ಟ-ನಷ್ಟದ ನೋವಿನ ಅಪಮಾನದ ಪ್ರಸಂಗಗಳನ್ನು, ತಮ್ಮ ಹುಟ್ಟು, ಬಾಲ್ಯ, ಯೌವ್ವನ, ಪ್ರೌಢಿಮೆ ಕಾಲದಲ್ಲಿ ಕಂಡು- ಉಂಡ ಏಳು- ಬೀಳಿನ ಗೋಳಿನ ಘಟನೆಗಳನ್ನು ದಾಖಲಿಸಿದ್ದಾರೆ.

About the Author

ಬಂಧು ಸಿದ್ದೇಶ್ವರಕರ್ ಕೆ.ಎಸ್.

ಲೇಖಕ ಬಂಧು ಸಿದ್ದೇಶ್ವರಕರ್ ಕೆ.ಎಸ್. ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು. ಕೃತಿಗಳು: ನನ್ನ ಜೀವನ ಡಾ.ಅಂಬೇಡ್ಕರ್, ಭೀಮ ಗರ್ಜನೆ, ಮಗು-ನಗು. ಅವರಿಗೆ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆಯಿಂದ ಕಲಾರತ್ನ ಪ್ರಶಸ್ತಿ ಲಭಿಸಿದೆ. ...

READ MORE

Related Books