ನಾನೆಂಬ ಭಾರತೀಯ ಆತ್ಮಕಥನವು ಮಲಯಾಳಂ ಭಾಷೆಯಲ್ಲಿ ರಚಿತವಾಗಿದ್ದು ಕೆ.ಕೆ ಮಹಮ್ಮದ್ ಅವರು ರಚಿಸಿದ್ದಾರೆ. ಈ ಕೃತಿಯ ಕನ್ನಡನುವಾದವನ್ನು ಬಿ. ನರಸಿಂಗ ರಾವ್ ಅವರು ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಬಿಂಬಿಸಾರ, ಅಶೋಕ ಚಕ್ರವರ್ತಿ, ಸಮುದ್ರಗುಪ್ತ, ಹರ್ಷ, ಅಕ್ಬರ್, ಷಹಜಹಾನ್, ಅಫೊನ್ದ ಅಲ್ಬುಕರ್ಕ್ ಮೊದಲಾದ ರಾಜ-ಮಹಾರಾಜರುಗಳ ಐತಿಹಾಸಿಕ ಸ್ಮಾರಕಗಳು ಭಾರತದ ಚಾರಿತ್ರಿಕ ಮೈಲುಗಲ್ಲುಗಳು. ಇವೆಲ್ಲವುಗಳ ಜೀರ್ಣೋದ್ಧಾರ, ದುರಸ್ತಿ ಮಾಡಲು ಸಂದರ್ಭ ಒದಗಿ ಬರಬೇಕೆಂದು ಯಾವನೇ ಇತಿಹಾಸದ ವಿದ್ಯಾರ್ಥಿ ಕಾಣುವ ಸ್ವಾಭಾವಿಕ ಕನಸು. ನನಗಂತೂ ಅಂತಹ ಸೌಭಾಗ್ಯ ಒದಗಿತು. ಪುನರ್ ನವೀಕರಣದಲ್ಲಿ ನಾನು ವಹಿಸಿದ ಪಾತ್ರ ಬಹಳ ಪ್ರಮುಖವಾದ್ದು. ವರ್ಷಗಳು ಸಂದರೂ ಅಲ್ಲಿನ ಜನರು ಪ್ರಿತಿಯಿಂದ ಅದನ್ನು ನೆನೆಯದಿರಲಾರರು. ನಾನು ಜೀವನದಲ್ಲಿ ಸಾಗಿ ಬಂದ ಹಾದಿ, ಭೇಟಿಯಾದ ಜನರು, ಮಾಡಿ ಮುಗಿಸಿದ ಯಜ್ಞಗಳು ಇವಷ್ಟೇ ’ನಾನೆಂಬ ಭಾರತೀಯ’ದ ತಿರುಳು ಎಂದು ಕೃತಿಯ ಕುರಿತಾಗಿ ಲೇಖಕರು ವಿವರಿಸಿದ್ದಾರೆ.
©2024 Book Brahma Private Limited.