ಮಲಯಾಳಂನ ಲೇಖಕ, ಇತಿಹಾಸ ತಜ್ಞ ಕೆ.ಕೆ. ಮಹಮ್ಮದ್ ಅವರು ಬರೆದ ಆತ್ಮಕಥನ-ನಾನೆಂಬ ಭಾರತೀಯ. ಕೃತಿಗೆ ಬೆನ್ನುಡಿ ಬರೆದ ಲೇಖಕ ರೋಹಿತ್ ಚಕ್ರವರ್ತಿ ‘ ಕೆ.ಕೆ. ಮಹಮ್ಮದ್ ಅವರ ಜೀವನ ಚರಿತ್ರೆ ಓದುವಾಗ ರೋಮಾಂಚನದ ಜೊತೆಗೆ ಖೇದವೂ ಆಗುತ್ತದೆ. ಭಾರತದಲ್ಲಿ ಇತಿಹಾಸ ಸಂಶೋಧನೆಯೂ ಹೇಗೆ ಕಮ್ಯೂನಿಸ್ಟ್ ರ ಹಾಗೂ ಮೂಲಭೂತವಾದಿಗಳ ಮನೆಯ ಜೀತದಾಳಾಗಿತ್ತು ಎಂಬುದು ಈ ಕೃತಿಯಿಂದ ತಿಳಿಯುತ್ತದೆ. ನಳಂದದ ಬೌದ್ಧಭಿಕ್ಷುಗಳಿಂದ ಚೆಂಬಲ್ ಕಣಿವೆಯ ದರೋಡೆಕೋರರವರೆಗೆ, ಕ್ರೈಸ್ತರಿಗೆ ಚರ್ಚುಗಳನ್ನು ಕಟ್ಟಿಸಿದ ಅಕ್ಬರ್ ನಿಂದ ಜೆಎನ್ ಯು ಅಂಗಳದ ತುಕ್ಡೆ ತುಕ್ಡೆ ಬುದ್ದಿವಂತರವರೆಗೆ ಕಾಲದ ಪಟ್ಟಿಯಲ್ಲಿ ಹಿಂದಕ್ಕೂ ಮುಂದಕ್ಕೂ ಜೀಕಾಡುವ ಈ ಕೃತಿ, ಕನ್ನಡಿಗರಿಗೆ ಒಂದು ಹೊಸ ಓದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.