ಮೂರನೆಯ ಇರುವು

Author : ಅರವಿಂದ ಚೊಕ್ಕಾಡಿ

₹ 120.00




Year of Publication: 2022
Published by: ಯಾಜಿ ಪ್ರಕಾಶನ
Address: ಯಾಜಿ ಪ್ರಕಾಶನ, ಉಮಾಮಹೇಶ್ವರ ಬಿಲ್ಡಿಂಗ್, ಸೀನಂಭಟ್ಟ ಕಚೇರಿ ಹತ್ತಿರ, ನಾಲ್ಕನೇ ವಾರ್ಡ್, ಪಟೇಲ ನಗರ, ಹೊಸಪೇಟೆ-583201, ಕರ್ನಾಟಕ
Phone: 7019637741, 94499 22800, 9481042400

Synopsys

ಅರವಿಂದ ಚೊಕ್ಕಾಡಿಯವರು ಬರೆದ ಸುಂದರ ಕೃತಿ 'ಮೂರನೆಯ ಇರುವು'. ಪುಸ್ತಕದ ಬೆನ್ನುಡಿಯಲ್ಲಿ ಯು ಆರ್ ಅನಂತಮೂರ್ತಿ ಇವರು ಹೀಗೆ ಬರೆದಿದ್ದಾರೆ " ಕನ್ನಡ ಭಾಷೆಯಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ದೀರ್ಘವಾಗಿ ಸಮಗ್ರವಾಗಿ ಯೋಚಿಸಿ ಬರೆದಿರುವವರ ಸಂಖ್ಯೆ ತೀರಾ ವಿರಳ. ಅರವಿಂದ ಚೊಕ್ಕಾಡಿ ಅವರ ಈ ಪುಸ್ತಕ ವಿನಾಯಿತಿ. ಬ್ರಿಟಿಷ್ ವಿಮರ್ಶಕನೊಬ್ಬ ಶೋಧನಾತ್ಮಕವಾದ ಬರಹಗಾರರಿಗೆ ಒಂದು ಸೂಚನೆ ಕೊಡುತ್ತಾನೆ "Only Connect” ಅಂದರೆ ಸಂಬಂಧವಿರದಂತೆ ಕಾಣುವ ವಿಷಯಗಳಲ್ಲಿ ಸಂಬಂಧಗಳನ್ನು ಕಂಡಾಗ ನಿಜವಾದ ಚಿಂತನೆ ಪ್ರಾರಂಭವಾಗುತ್ತದೆ. ಉತ್ಪಾದನಾ ವಿಧಾನಕ್ಕೂ ಉತ್ಪಾದನಾ ಸಂಬಂಧಗಳಿಗೂ ನಡುವೆ ಕೊಂಡಿಯನ್ನು ಕಾಣುವವನು ನಮಗೆ ಪರಿಚಯವಿರುವ ಮಾರ್ಕಿಸ್ಟರಿಗಿಂತ ಮುಂದೆ ಹೋಗುತ್ತಾನೆ. ನಮ್ಮ ಕ್ರಾಂತಿಕಾರರು ಉತ್ಪಾದನಾ ಸಂಬಂಧಗಳನ್ನು ಬದಲಾಯಿಸಿದರೆ ಮಾತ್ರ ಹೊಸ ಯುಗ ಪ್ರಾರಂಭವಾಗುತ್ತದೆಂದು ತಿಳಿಯುತ್ತಾರೆ. ಆದರೆ ಮಹಾತ್ಮ ಗಾಂಧಿಯವರು ಉತ್ಪಾದನಾ ವಿಧಾನದಲ್ಲೂ ಬದಲಾವಣೆಗಳನ್ನು ಬಯಸುತ್ತಾರೆ. ಈ ಮೂಲಕ ಒಂದು ಹೊಸ ಸಂಸ್ಕೃತಿಯೂ, ಮನುಷ್ಯನ ಒಳಬಾಳಿನ ನೆಮ್ಮದಿಯೂ ಒಟ್ಟೊಟ್ಟಿಗೇ ಸಾಧಿತವಾಗುತ್ತದೆ. ಅರವಿಂದ ಚೊಕ್ಕಾಡಿಯವರು ತಮ್ಮ ಸುತ್ತಲಿನ ಎಲ್ಲ ವಿಚಾರಗಳನ್ನು ಪರೀಕ್ಷಿಸಿ, ತಮ್ಮದೇ ಆದ ಒಂದು ಯೋಚನಾ ಕ್ರಮವನ್ನು ಈ ಪುಸ್ತಕದಲ್ಲಿ ನಮ್ಮೆದುರು ಇಟ್ಟಿದ್ದಾರೆ

About the Author

ಅರವಿಂದ ಚೊಕ್ಕಾಡಿ
(21 December 1975)

 ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ  ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ  ಬಿ. ಇಡ್. ಪದವೀಧರರಾಗಿರುವ ಇವರು  ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...

READ MORE

Related Books