ಮೋಹನದಾಸ ಕರಮಚಂದ ಗಾಂಧಿ ಆತ್ಮಕಥೆ: ನನ್ನ ಸತ್ಯಶೋಧನೆಯ ಕಥೆ’ ಈ ಕೃತಿಯನ್ನು ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾತ್ಮಗಾಂಧಿ ಅವರು ಮಹಾತ್ಮನಾಗುವ ಮೊದಲು ಅವರು ಎಲ್ಲರಂತೆ ಸಾಮಾನ್ಯರೇ ಆಗಿದ್ದರು. ಆದರೆ, ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು, ಶೋಷಣೆ-ದಬ್ಬಾಳಿಕೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅದನ್ನು ಅಹಿಂಸೆಯ ಮೂಲಕವೇ ವಿರೋಧಿಸಿ, ಪ್ರತಿಭಟಿಸುವುದನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಳ್ಳುತ್ತಲೇ ಹಂತಹಂತವಾಗಿ ಹೋರಾಟ ಮಾಡಿ ಮಹಾತ್ಮರಾಗುವ ಪರಿಯನ್ನು ಸ್ವತಃ ಗಾಂಧಿ ಅವರ ಜೀವನ ಚರಿತ್ರೆಯ ಪುಸ್ತಕದಿಂದ ತಿಳಿದು ಬರುತ್ತದೆ. ಯಾವ ಕಾಲಕ್ಕೂ ಅಹಿಂಸೆ, ಶಾಂತಿ ಮಂತ್ರ ಬಿಡಬಾರದು ಎಂಬ ಸಂಕಲ್ಪದೊಂದಿಗೆ ಅವರು ತಮ್ಮ ಬದುಕನ್ನು ಗಟ್ಟಿ ಮಾಡಿಕೊಂಡರು. ಆ ಮೂಲಕವೇ ಭಾರತ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿದರು. ದೇಶದಲ್ಲಿರುವ ಅಸ್ಪೃಶ್ಯತೆ ವಿರುದ್ಧ ಹೋರಾಡಿದರು. ಕೋಮು ಸೌಹಾರ್ದತೆ ಕಾಯ್ದುಕೊಳ್ಳಲು ಶ್ರಮಿಸಿದರು. ಇಂತಹ ಸಂಗತಿಗಳು ಓದುಗರ ಮೇಲೆ ಗಂಭೀರ ಪರಿಣಾಮ ಬೀರುವ ಅಂಶಗಳನ್ನು ಒಳಗೊಂಡ ಕೃತಿ ಇದು.
©2024 Book Brahma Private Limited.