ಮೋಡಿಯು ಲಿಪಿಯೋ, ಭಾಷೆಯೋ ಎನ್ನುವ ಜಿಜ್ಞಾಸೆ ಇದೆ. ತನ್ನ ಬರವಣಿಗೆಯ ಶೈಲಿ ಹಾಗೂ ಗುಣದಿಂದಾಗಿ ಅನೇಕ ವಿನ್ಯಾಸಗಳನ್ನು ಪಡೆದಿದೆ. ಜಗತ್ತಿನ ಶೀಘ್ರ ಲಿಪಿಯೂ ಆಗಿದೆ ಎಂಬ ಖ್ಯಾತಿ ಇದಕ್ಕಿದೆ. ಆಡಳಿತದ ವ್ಯವಹಾರಗಳಿಗಾಗಿ ಇದನ್ನು ಬಳಸುತ್ತಿದ್ದರು. ಮೋಡಿ ಲಿಪಿಗೆ ಕೇವಲ ರಚನಾತ್ಮಕ ಹಿನ್ನೆಲೆ ಮಾತ್ರವಲ್ಲ; ಅದಕ್ಕೆ ಸಾಂಸ್ಕೃತಿಕ ಹಿನ್ನೆಲೆಯೂ ಇದೆ. ಮರಾಠರ ಕಾಲದಲ್ಲಿ ಹೆಚ್ಚು ಬಳಕೆಯಲ್ಲಿತ್ತು ಎಂದು ಹೇಳಲಾಗುತ್ತಿದೆ. ಈ ಕೃತಿಯಲ್ಲಿ ಮೋಡಿಲಿಪಿಯ ಸಂವರ್ಧನೆ, ಆಡಳಿತ ವ್ಯವಹಾರದಲ್ಲಿ ಮೋಡಿ ಲಿಪಿ, ಮಾಡಿಲಿಪಿ ಹಾಗೂ ಶಾಲಾಪಠ್ಯಗಳು, ಮೋಡಿ ಲಿಪಿಯ ಸಂರಚನೆ ಹೀಗೆ ವಿಷಯ ವೈವಿಧ್ಯತೆಗಳನ್ನು ಒಳಗೊಂಡಿದೆ.
(ಹೊಸತು, ಮಾರ್ಚ್ 2012, ಪುಸ್ತಕದ ಪರಿಚಯ)
ಸಾಮಾನ್ಯವಾಗಿ ಮೋಡಿ ಲಿಪಿ ಎಂದರೆ ಓದಲಾಗದ ಅಕ್ಷರಗಳೆಂದು ತಿಳಿಯುತ್ತೇವೆ. ಕೆಲವು ಡಾಕ್ಟರರು ಬರೆದುಕೊಡುವ ಔಷಧದ ಪ್ರಿಸ್‌ಕ್ರಿಪ್ಪನ್ ನಂತೆ ! ಒಬ್ಬೊಬ್ಬರ ಹಸ್ತಬರವಣಿಗೆ ಒಂದೊಂದು ತರಹ, ಇಂದಿನಂತೆ ಟೈಪ್ ರೈಟರ್ - ಕಂಪ್ಯೂಟರ್ ಗಳಿಲ್ಲದ ಪ್ರಾಚೀನ ಕಾಲದಲ್ಲಿ ಎಲ್ಲವೂ ಕೈಬರಹದಲ್ಲೇ ದಾಖಲಾಗುತ್ತಿತ್ತು ಮಹಾ ಮಹಾ ಗ್ರಂಥಗಳೆಲ್ಲ ಹಸ್ತಪ್ರತಿಗಳಲ್ಲೇ ಇದ್ದವೆಂದರೆ ಈಗಿನ ಜನ ಮೂಗಿಗೆ ಬೆರಳೇರಿಸುತ್ತಾರೆ. ಇದೀಗ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿದ್ದು ಭಾಷಾಭಿವೃದ್ಧಿ ಕಾರ್ಯಕ್ರಮ ಗಳಿಗೆ ವಿಶೇಷ ಚಾಲನೆ ದೊರೆತಿದೆ, ಕನ್ನಡ ಭಾಷೆಯ ಸಾಹಿತ್ಯ, ಶಾಸನ, ಇತಿಹಾಸ, ಹಸ್ತಪ್ರತಿಗಳ ಅಧ್ಯಯನ – ಸಂಶೋಧನೆ ನಡೆಯುತ್ತಿದೆ. ಅಂತೆಯೇ ಕನ್ನಡ ಮೋಡಿಲಿಪಿ ಯನ್ನೊಡುವ ಅತ್ಯಂತ ಪ್ರಕಾರ್ಯವೂ ಇದರಲ್ಲಿ ಸೇರಿದೆ. ಬಿಪಿ ಮೋಡಿಯಾಗಿರುವುದು ಕೈಬರಹದ ಸಹಜ ಲಕ್ಷಣವೇ ಅಥವಾ ಅನೇಕ ರಹಸ್ಯ ದಾಖಲೆಗಳನ್ನು ಕಾಪಾಡಲು ಹಾಗೊಂದು ಲಿಪಿಯ ಆವಶ್ಯಕತೆಯಿತ್ತೇ ಎಂಬುದು ಕೂಡ ಚರ್ಚೆಯಾಗಬೇಕಾದ ವಿಷಯ ಮೋಡಿ ಬರಹ ರಾಜಾಜ್ಞೆಗಳನ್ನು ಬರೆಯುವ ಸಂದರ್ಭದಲ್ಲೂ ಬಳಕೆಯಾಗುತ್ತಿತ್ತಂತೆ. ಮೋಡಿ ಒಂದು ಭಾಷೆಯೇ ಅಥವಾ ಒಂದು ಲಿಪಿಯೇ ಎನ್ನುವುದು ಕೂಡ ಸಂಶೋಧನೆಯಾಗಬೇಕಿದೆ. ಎಲ್ಲಾ ಭಾಷೆಗಳಲ್ಲೂ ಬಹಳ ಅವಸರವಸರವಾಗಿ ಬರೆದಾಗ ಆಯಾ ಭಾಷೆಯ ಮೋಡಿ ಅಕ್ಷರಗಳೇ ಮೂಡುತ್ತಿವೆ. ಒಂದು ಅನುಕೂಲಕ್ಕಾಗಿ ಸಂರಚಿಸಿ - ಸಂವರ್ಧನೆಗೊಳಿಸಿದ ಈ ರಹಸ್ಯವೊಂದನ್ನು ಇಲ್ಲಿ ವಿಸ್ತಾರವಾಗಿ ಅಧ್ಯಯನ ಮಾಡಲಾಗಿದೆ. ಕೃತಿ ರಚಿಸಿದ ವೀರೇಶ ಬಡಿಗೇರ ಕನ್ನಡ ಮತ್ತು ಮರಾಠಿ ಭಾಷೆಯಲ್ಲಿನ ಈ ಮೋಡಿಲಿಪಿಯನ್ನು ಸಂಗ್ರಹಿಸಿ ಇದನ್ನೊಂದು ಆಕರಗ್ರಂಥವನ್ನಾಗಿ ಮಾಡಿದ್ದಾರೆ.
©2024 Book Brahma Private Limited.