ಹೊಸ ಕನ್ನಡ ಭಾಷಾ ವ್ಯಾಸಂಗ

Author : ಸಂಗಮೇಶ ಸವದತ್ತಿಮಠ

Pages 324

₹ 200.00




Year of Publication: 2017
Published by: ರೂಪರಶ್ಮಿ ಪ್ರಕಾಶನ,
Address: # ಸನ್ನಿಧಿ 171, ಕುಮಾರೇಶ್ವರ ನಗರ. ಬೆಳಗಾವಿ ರಸ್ತೆ, ಧಾರವಾಡ

Synopsys

ಡಾ. ಸಂಗಮೇಶ ಸವದತ್ತಿಮಠ ಅವರ ಕೃತಿ-ಹೊಸ ಕನ್ನಡ ಭಾಷಾ ವ್ಯಾಸಂಗ. ಹೆಸರೇ ಸೂಚಿಸುವಂತೆ ಹೊಸಗನ್ನಡ ಭಾಷೆ- ವ್ಯಾಕರಣ ಸ್ವರೂಪ ಇತ್ಯಾದಿ ಕುರಿತು ಅಧ್ಯಯನ ಯೋಗ್ಯ ಮಾಹಿತಿ ಒಳಗೊಂಡ ಕೃತಿ ಇದು. ಕನ್ನಡ ಭಾಷೆಯು ಬೆಳೆದು ಬಂದು, ವ್ಯಾಕರಣ ಸಮೃದ್ಧವಾಗಿ ತದನಂತರದ ಬೆಳವಣಿಗೆಯಲ್ಲಿ ಅದು ಪಡೆದ ರೂಪು ಇತ್ಯಾದಿ ವಿವರಗಳ ಚಿತ್ರಣ ನೀಡುತ್ತದೆ. 

About the Author

ಸಂಗಮೇಶ ಸವದತ್ತಿಮಠ
(01 April 1943)

ಡಾ. ಸಂಗಮೇಶ ಸವದತ್ತಿಮಠ ಅವರು  ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕ ಮುರಗೋಡದಲ್ಲಿ ಜನಿಸಿದ್ದಾರೆ. ಧಾರವಾಡ, ಬೆಳಗಾವಿ ಜಿಲ್ಲೆಯ ವಿವಿಧಡೆ ಅಭ್ಯಾಸ ಮಾಡಿ ಕರ್ನಾಟಕ ವಿ.ವಿ.ಯಲ್ಲಿ ಕನ್ನಡ ಮತ್ತು ಭಾಷಾವಿಜ್ಞಾನದಲ್ಲಿ ಎಂ.ಎ. ನಂತರ ಭಾಷಾವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1965 ರಿಂದ 68ರ ವರೆಗೆ ಕೊಪ್ಪಳ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ 1970 ರಿಂದ 72 ರವರೆಗೆ ನರಗುಂದ ಕಾಲೇಜಿನಲ್ಲಿ ಅಧ್ಯಾಪಕರು, ನಂತರ ವಿ.ವಿ.ಯಲ್ಲಿ ಕಲಾನಿಕಾಯದ ಡೀನ್ ಹಾಗೂ ವಿಶೇಷಾಧಿಕಾರಿಯಾಗಿ ನಿವೃತ್ತರಾದರು. ಭಾಷಾವಿಜ್ಞಾನ, ಸಂಶೋಧನೆ, ಸಂಪಾದನೆ ಜಾನಪದ, ವಿಮರ್ಶೆ ಹಾಗೂ ಸೃಜನಶೀಲಕ್ಕೆ ಸಂಬಂಧಿಸಿದ ಒಟ್ಟು130 ಕೃತಿಗಳನ್ನು ರಚಿಸಿದ್ದಾರೆ. ಇವರ ಹೆಸರಿನಲ್ಲಿಯೇ ಒಂದು ...

READ MORE

Related Books