ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಯ ಭಾಗವಾಗಿರುವ ತತ್ವಪದಕಾರರ ತತ್ವಪದಗಳನ್ನು ಪರಿಚಯಿಸುವ ಹೊಸ ಪ್ರಯತ್ನ ಈ ಕೃತಿಯಲ್ಲಾಗಿದೆ. ಕನ್ನಡದ ಪ್ರಮುಖ ತತ್ವಪದಕಾರರಲ್ಲಿ ಒಬ್ಬರಾದ ಹೊಳಲಗುಂದಿ ಸಾಹಿಬಣ್ಣ ತಾತನವರ ಕುರಿತು ಅವರ ತತ್ವಪದಗಳು, ಕರ್ನಾಟಕ ಆಂಧ್ರಪ್ರದೇಶದಲ್ಲೆಲ್ಲಾ ಶಿಷ್ಯರನ್ನು ಹೊಂದಿದ್ದ ಇವರು ಎರಡೂ ರಾಜ್ಯಗಳ ಜನರನ್ನು ಜಾಗೃತರಾಗಿಸಿದ ಬಗೆ ಎಲ್ಲವನ್ನು ಈ ಕೃತಿಯಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ.
ಧಾರ್ಮಿಕ ಸಂಘರ್ಷದ ಕಾಲಾವಧಿಯಲ್ಲಿ ಅದರಲ್ಲಿಯೂ ಹೈದ್ರಬಾದ್ ನಿಜಾಮರ ಕಾಲಾವಧಿಯಲ್ಲಿ ಆಂಧ್ರದ ಕರ್ನೂಲು-ಅನಂತಪುರ ಮತ್ತು ಕರ್ನಾಟಕದ ಗಡಿಭಾಗದಲ್ಲಾದ ಸಮುದಾಯಗಳ ನಡುವಣ ತೀವ್ರತರವಾದ ತಲ್ಲಣಗಳಿಗೆ ಸಾಯಿಬಣ್ಣನವರ ತಾತ್ವಕ ನೆಲೆಗಟ್ಟು ಸಾಂತ್ವಾನವನ್ನು ಹೇಳಿದೆ. ಹಿಂದೂ ಮತ್ತು ಮುಸಲ್ಮಾನರ ನಡುವಣ ವೈರುಧ್ಯವನ್ನು ಸಂಘರ್ಷವೆಂದು ಹೇಳಲು ಹೋರಟ ಸಾಯಿಬಣ್ಣನಿಗೆ ಎದುರಾದ ಸಮಸ್ಯೆಗಳು ಇಂತಹ ಸಾಮಾಜಿಕ ಸಮಕಾಲೀನ ತಲ್ಲಣಗಳೇ ತತ್ವಪದಗಳ ಹುಟ್ಟಿಗೆ ಕಾರಣವಾದ ಬಗೆ, ಸಾಯಿಬಣ್ಣನ ಸಮಾನತೆ, ಸೋದರತ್ವ ಸಾರುವ ತತ್ವಪದಗಳು, ಪ್ರಸ್ತುತ ಸಂದರ್ಭಕ್ಕೆ ತತ್ವಪದಗಳ ಅಗತ್ಯ ಮುಂತಾದವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಎರಡು ರಾಜ್ಯಗಳ ಭಾವಬಂಧ, ತತ್ವಪದ ಹಾಗೂ ಸೂಫಿಗೀತೆಗಳ ಪರಂಪರೆ, ಮಾನವೀಯ ಮೌಲ್ಯಗಳ ಪರವಾದ ಹೋರಾಟ ಇವೆಲ್ಲವೂ ಈ ಕೃತಿಯಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ.
©2024 Book Brahma Private Limited.