ಬೀದರ್‌ ಜಿಲ್ಲಾ ರಂಗಮಾಹಿತಿ

Author : ಚಂದ್ರಗುಪ್ತ ಚಾಂದಕವಠೆ

Pages 124

₹ 60.00




Year of Publication: 2017
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಬೀದರ್‌ ಜಿಲ್ಲೆಯ ರಂಗಭೂಮಿ ಕುರಿತ ಮಾಹಿತಿ ನೀಡುವ ಕೃತಿ ಇದಾಗಿದೆ. ಬೀದರ್‌ ಜಿಲ್ಲೆಯ ರಂಗಭೂಮಿಯ ಹಿನ್ನೆಲೆ, ಸಣ್ಣಾಟಗಳು, ಬಯಲಾಟಗಳು, ಕೋಲಾಟ, ಅರೆ ವೃತ್ತಿ ರಂಗಭೂಮಿ, ವೃತ್ತಿ ರಂಗಭೂಮಿ, ನಾಟಕಕಾರರು, ನಾಟಕಗಳು, ಹವ್ಯಾಸಿ ರಂಗ ತಂಡಗಳು, ಎದೆ ತುಂಬಿ ಹಾಡಿದ ರಂಗ ಗೀತೆಗಳು, ಮಕ್ಕಳ ರಂಗ ನಾಟಕಗಳು, ಸಂಘಟಕರು, ಕಲಾವಿದರು, ಸಂಗೀತಕಾರರು, ನೇಪಥ್ಯ ಕಲಾವಿದರು, ಕಲಾವಿದೆಯರು, ನಾಟಕ, ಸಂಗೀತ ಪರಿಕರಗಳು ದೊರೆಯುವ ಸ್ಥಳ, ರಂಗ ಮಂದಿರಗಳು ಒಂದು ನೋಟ, ವಿವಿಧ ನಾಟಕ ಶಾಲೆಗಳ ಪದವಿ ಪಡೆದವರು, ಚಲನಚಿತ್ರಗಳಲ್ಲಿ ನಟಿಸಿದ ಕಲಾವಿದರು, ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು ಮುಂತಾದ ಮಾಹಿತಿಗಳು ಈ ಕೃತಿಯಲ್ಲಿವೆ.

About the Author

ಚಂದ್ರಗುಪ್ತ ಚಾಂದಕವಠೆ
(01 September 1955 - 23 April 2022)

ಮೂಲತಃ ಬಿಜಾಪುರ ಜಿಲ್ಲೆಯ ಆಲಮೇಲ್‌ದವರಾದ ಚಂದ್ರಗುಪ್ತ ಚಾಂದಕವಠೆ ಅವರು ಸದ್ಯ ಬೀದರನ ನಿವಾಸಿಯಾಗಿದ್ದಾರೆ. ಬೀದರ್‌ನಲ್ಲಿ ಬಿ.ಎಸ್‌.ಎನ್‌.ಎಲ್‌.ನಲ್ಲಿ ಎಂಜಿನಿಯರ್‌ ಆಗಿದ್ದ ಅವರು ನಿವೃತ್ತರಾಗಿದ್ದಾರೆ. ಚಂದ್ರಗುಪ್ತ ಅವರು ರಂಗಭೂಮಿ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದವರಾಗಿದ್ದಾರೆ. ಎಪ್ರಿಲ್ 23, 2022ರಂದು ವಿಧಿವಶರಾದರು.  ...

READ MORE

Related Books