ಬರಿಯ ನೆನಪಲ್ಲ!

Author : ಆಕರ್ಷ ರಮೇಶ್ ಕಮಲ

₹ 220.00




Year of Publication: 2021
Published by: ಕಥನ ಪ್ರಕಾಶನ
Address: ನಂ.405, 19ನೆ ಜಿ ಮುಖ್ಯರಸ್ತೆ, 1ನೇ ಬ್ಲಾಕ್ ರಾಜಾಜಿನಗರ, ಬೆಂಗಳೂರು- 560010
Phone: 09739277750

Synopsys

ಲೇಖಕ ಆಕರ್ಷ ರಮೇಶ್ ಕಮಲ ಅವರ `ಬರಿಯ ನೆನಪಲ್ಲ!’ ಪ್ಯಾಲಸ್ತೀನಿ ಭಾವುಕ ಕಥನ’ ಎಂಬುದು ಅನುವಾದಿತ ಕೃತಿ. ಕೆನಡಾದ ಮಾರ್ಸೆಲ್ಲೊ ಡಿ ಸಿಂಟಿಯೊ ಎಂಬ ಬರಹಗಾರನ ‘ಪೆ ನೋ ಹೀಡ್ಸ್ ಟು ರಾಕೆಟ್ಸ್: ಪ್ಯಾಲೆಸ್ಟೈನ್ ಇನ್ ಪ್ರೆಸೆಂಟ್ ಟೆನ್ಸ್ ಎಂಬ ಅನುಭವ ಕಥನದ ಕನ್ನಡ ಅನುವಾದವಾಗಿದೆ. ಈ ಕೃತಿ ಸಮಕಾಲೀನ ಪ್ಯಾಲೆಸ್ತೀನ್ ಬದುಕನ್ನು, ಆ ಪ್ರದೇಶದ ಶ್ರೀಮಂತ ಸಾಹಿತ್ಯ, ಸಂಸ್ಕೃತಿಯನ್ನು  ಅನಾವರಣಗೊಳಿಸುತ್ತದೆ. ನೆಲವಿಲ್ಲದವರ ಬದುಕಿನ ಬವಣೆಗಳು, ಪ್ರೇಮ-ಗೆಳೆತನ, ಕುಡಿದು ಖಾಲಿಯಾದ ಚಹಾ-ಕಾಫಿಗಳ ಪರಿಮಳ, ಕ್ರಾಂತಿಯ ಕಿಚ್ಚುಗಳು ಈ ಕೃತಿಯಲ್ಲಡಗಿವೆ. ಹಾರಿಹೋದ ಹೂಗಳ ಸುಗಂಧವಿದೆ. ಅಂತೆಯೇ, ಪಥಭ್ರಾಂತರಾಗಿ ಮರೆಯಾದ, ಹುತಾತ್ಮರಾದ ಪ್ರೀತಿಪಾತ್ರರ ಮುಖಗಳಿವೆ. ಘಸ್ಸಾನ್ ಕನಫಾನಿಯಂತಹ ಲೇಖಕರಿದ್ದಾರೆ. ಮಹಮೂದ್ ದರ್ವಿಶ್ ರಂಥ ಕವಿಗಳು ಕೆತ್ತಿದ ಶಾಸನದಂತಹ ಕವಿತೆಗಳಿವೆ. ಈ ಕವಿತೆಗಳು ಕೆಚ್ಚೆದೆಯ ಹೋರಾಟಗಾರರಿಗೆ ಬೆಳಕು-ಭರವಸೆಯನ್ನು, ಮುಂದಣ ಕವಿಗಳಿಗೆ ಕಾವ್ಯದುಸಿರನ್ನು ತುಂಬುತ್ತವೆ. ಈ ಪುಸ್ತಕವು ಗತ - ವರ್ತಮಾನಗಳನ್ನು ಮುಖಾಮುಖಿಯಾಗಿಸುತ್ತ ಭವಿಷ್ಯವನ್ನು ಕನಸುತ್ತದೆ. ಕನ್ನಡದ ಓದುಗರಿಗೆ ಪ್ಯಾಲೆಸ್ತೀನಿನ ಕಾವ್ಯ, ಕಾವು, ಕನಸುಗಳನ್ನು ಪರಿಚಯಿಸುತ್ತದೆ ಎಂಬುದಾಗಿ ಲೇಖಕರು ಅಭಿಪ್ರಾಯಪಟ್ಟಿದ್ದಾರೆ. 

About the Author

ಆಕರ್ಷ ರಮೇಶ್ ಕಮಲ
(18 December 1984)

ಆಕರ್ಷ ರಮೇಶ್ ಕಮಲ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ತಂದೆ ಎಸ್. ರಮೇಶ್ ವಕೀಲರು. ತಾಯಿ - ಎಂ.ಆರ್. ಕಮಲ ಕನ್ನಡದ ಪ್ರಸಿದ್ದ ಕವಯತ್ರಿ, ಲೇಖಕಿ. ಅಮೆರಿಕಾದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ವ್ಯಾಸಂಗವನ್ನು ಮಾಡಿ ಕೆಲಕಾಲ ಅಮೆರಿಕಾ, ಸ್ವಿಟ್ಸರ್ಲ್ಯಾಂಡ್, ಮತ್ತು ಫ್ರಾನ್ಸ್,  ದೇಶಗಳಲ್ಲಿ ನೆಲೆಸಿದ್ದರು.  ವೃತ್ತಿಯಲ್ಲಿ ಬೆಂಗಳೂರಿನ ಖಾಸಗೀ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಹಲವಾರು ಆಸಕ್ತಿಗಳತ್ತ ಮುಖ ಮಾಡಿರುವ ಆಕರ್ಷ ಪ್ರೆಸೆಂಟ್ ಸರ್, ಮರೀಚಿ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿ ಸಿನೆಮಾ ರಂಗಕ್ಕೆ ಪ್ರವೇಶಿಸಿದ್ದಾರೆ. ಇವರ ಈ ಕಿರುಚಿತ್ರಗಳು ಅಂತರಾಷ್ಟ್ರೀಯ ಚಲನ ...

READ MORE

Related Books